ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವರ ಅವಹೇಳನ; ಪ್ರತಿಭಾ ಕುಳಾಯಿ ಖಂಡನೆ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವರ ಜಾತಿ ಬಗ್ಗೆ ಶಂಕರ್ ಶೆಟ್ಟಿ ಎಂಬ ವ್ಯಕ್ತಿ ಅವಹೇಳನ ಮಾಡಿದ್ದನ್ನು ಮಾಜಿ ನಗರ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಖಂಡಿಸಿ ಮಂಗಳೂರು ಕಮಿಷನರ್ ಗೆ ದೂರು ನೀಡಿದ್ದಾರೆ.

ಅವರು ಮಾಧ್ಯಮದೊಂದಿಗೆ ಮಾತನಾಡಿ ಬಿಲ್ಲವರು ಅಥವಾ ಬೇರೆ ಯಾವ ಜಾತಿಯ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರವಿಲ್ಲ.

ಬಿಲ್ಲವರ ಬಗ್ಗೆ ಅವಹೇಳನ ಮಾಡಿದ ಶಂಕರ್ ಶೆಟ್ಟಿ ಎಂಬಾತ ಮಾನಸಿಕ ಅಸ್ವಸ್ಥನಂತೆ ಗೋಚರಿಸುತ್ತಿತ್ತು ಆತನನ್ನು ಮಂಗಳೂರು ಬೆಂಗಳೂರು ಆಸ್ಪತ್ರೆಗೆ ದಾಖಲಿಸಿ ಆತನ ಟ್ರೀಟ್ಮೆಂಟ್ ಗೆ ನಾನೇ ಕರ್ಚು ಕೊಡುತ್ತೇನೆ ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ

ಈ ಹಿಂದೆ ಬಿಜೆಪಿಯ ಜಗದೀಶ ಅಧಿಕಾರಿ ಎಂಬ ವ್ಯಕ್ತಿ ಬಿಲ್ಲವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದು ಇನ್ನಾದರೂ ಬಿಲ್ಲವರು ಎಚ್ಚೆತ್ತು ಒಗ್ಗಟ್ಟಾಗಿ ಜಾತಿನಿಂದನೆ ಮಾಡಿದವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

02/12/2021 03:42 pm

Cinque Terre

1.67 K

Cinque Terre

0

ಸಂಬಂಧಿತ ಸುದ್ದಿ