ಮೂಡಬಿದ್ರೆ:ಮೂಡಬಿದರೆ ಪಟ್ಟಣ ವ್ಯಾಪ್ತಿಗೆ ತಯಾರಿಸಲಾದ ಮಹಾ ಯೋಜನೆಯ ಅಂತಿಮ ಹಂತದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಮಹಾ ಯೋಜನೆಯಲ್ಲಿನ ನಕ್ಷೆ ಹಾಗೂ ವಲಯ ನಿಯಮಾವಳಿಗಳ ಬಗ್ಗೆ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಸದರಿ ಯೋಜನೆಯನ್ನು ಜನಸ್ನೇಹಿ ಯೋಜನೆಯಾಗಿ ಮಾಡುವ ಉದ್ದೇಶದಿಂದ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರು ಮೂಡುಬಿದಿರೆ ಕನ್ನಡ ಭವನದಲ್ಲಿ ಸಭೆ ನಡೆಸಿದರು .
ಮಂಗಳೂರಿನ ಧರ್ಮರಾಜ್ ರವರು ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಮಹಾ ಯೋಜನೆಯ ವರದಿಯನ್ನು ಸಿದ್ಧಪಡಿಸಲು ತಮ್ಮ ಸಂಸ್ಥೆಯ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದು ವೈಜ್ಞಾನಿಕ ಭೂ ಸರ್ವೆಯನ್ನು ಮಾಡುವ ಬಗ್ಗೆ ತಿಳುವಳಿಕೆ ನೀಡಿ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಮೂಡುಬಿದಿರೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮೇಘನಾಥ್ ಶೆಟ್ಟಿ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ವಕೀಲ ಎಂ ಬಾಹುಬಲಿ ಪ್ರಸಾದ್, ಪುರಸಭಾ ಮುಖ್ಯಾಧಿಕಾರಿಗಳು, ಮೂಡುಬಿದಿರೆ ನಗರದ ಇಂಜಿನಿಯರ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರು ಮತ್ತು ನೊಂದಾಯಿತ ಇಂಜಿನಿಯರ್ಸ್, ವಕೀಲರು, ಬಿಲ್ಡರ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರು ಮತ್ತು ಸದಸ್ಯರು, ಯೋಜನಾ ಪ್ರಾಧಿಕಾರದ ಸದಸ್ಯರು ಪುರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.
Kshetra Samachara
19/10/2021 07:53 am