ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಂಪನಿಗಳ ಕಲುಷಿತ ನೀರಿನಿಂದ ಮೀನುಗಳ ದಾರುಣ ಸಾವು; ಜಿಲ್ಲಾಧಿಕಾರಿಗಳ ಜೊತೆ ಶಾಸಕರ ಸಭೆ; ಎಚ್ಚರಿಕೆ

ಮಂಗಳೂರು: ಜೆ.ಬಿ.ಎಫ್ ಕಂಪನಿಯು ಸುಮಾರು 6 ತಿಂಗಳಿನಿಂದ ಈ ಕಂಪನಿಯ ನೌಕರರಿಗೆ ವೇತನ ಸಿಗದಿರುವ ಬಗ್ಗೆ ನೌಕರರು ಶಾಸಕ ಉಮಾನಾಥ್ ಕೋಟ್ಯಾನ್ ರವರಿಗೆ ದೂರು ನೀಡಿದ್ದರು

ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಶಾಸಕ ಉಮನಾಥ್ ಕೋಟ್ಯಾನ್ ರವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೆ.ಬಿ.ಎಫ್ ಕಂಪನಿಯ ಅಧಿಕಾರಿಗಳ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು

ಜೆ.ಬಿ.ಎಫ್ ಕಂಪನಿಯ ಉನ್ನತ ಅಧಿಕಾರಿಗಳ ಬಳಿ ಸಂಪೂರ್ಣ ಮಾಹಿತಿ ಪಡೆದ ಶಾಸಕರು ಸರಕಾರದ ಮಟ್ಟದಲ್ಲಿ ಸಂಭಂದಿಸಿದ ಸಚಿವರುಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು

ಸುರತ್ಕಲ್ ಸಮೀಪದ ಕುತ್ತೆತ್ತೂರು ಹಾಗೂ ಪೆರ್ಮುದೆ ಭಾಗದ ಫಿಶ್ ಕಂಪೆನಿಗಳ ಕುಲಷಿತ ನೀರು ಹೊರಗಡೆ ಬಿಟ್ಟ ಪರಿಣಾಮ ಅನೇಕ ಮೀನುಗಳು ಸತ್ತಿದ್ದು ಇದರ ಬಗ್ಗೆಯೂ ಮಾನ್ಯ ಶಾಸಕರು ಸಂಭಂಧಿಸಿದ ಕಂಪನಿಗಳ ಅಧಿಕಾರಿಗಳ ಸಭೆ ನಡೆಸಿದರು

ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡಬೇಕು ಇಲ್ಲದಿದ್ದಲ್ಲಿ ಕಂಪನಿಯನ್ನು ಲಾಕ್ ಔಟ್ ಮಾಡುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು

Edited By : PublicNext Desk
Kshetra Samachara

Kshetra Samachara

19/10/2021 07:48 am

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ