ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕಂಪಾಡಿ: ಅಂಗಾರಗುಂಡಿ ಮಸೀದಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ

ಬೈಕಂಪಾಡಿ:ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಗರದ ಮೂಲಸೌಕರ್ಯಗಳಿಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಕಾರದಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅನುದಾನ 1.25 ಕೋ.ರೂ ಬಿಡುಗಡೆಯಾಗಿದ್ದು, ಬೈಕಂಪಾಡಿಯಿಂದ ಅಂಗಾರಗುಂಡಿಯ ಮಸೀದಿಗೆ ಹೋಗುವ ಮುಖ್ಯ ರಸ್ತೆಯ ಕಾಂಕ್ರೀಟಿಕರಣಕ್ಕೆ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಸರಕಾರದ ವಿವಿಧ ಇಲಾಖೆಗಳಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಅನುದಾನವಿದೆ. ಪ್ರಮುಖ ಸ್ಥಳಗಳನ್ನು ಗುರುತಿಸಿ ಬಹು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭ ಕೈಗಾರಿಕಾ ಪ್ರದೇಶಕ್ಕೆ ದಾಟಲು ಕೆಳಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಎನ್ಎಂಪಿಟಿ ಜತೆ ಸಭೆ ನಡೆಸಲಾಗಿದೆ. ನೂತನ ಮೇಲ್ಸೇತುವೆ ಆದಲ್ಲಿ ಈಗಿರುವ ರಸ್ತೆಯನ್ನು ಪರ್ಯಾಯವಾಗಿ ಬಳಸಲು ಚಿಂತನೆ ನಡೆದಿದೆ ಎಂದರು.

ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಅಬೂಬಕರ್ ಎನ್.ಬಿ, ಮ ನ ಪಾ ಸದಸ್ಯರಾದ ಸುಮಿತ್ರ ಕೆ, ಶ್ವೇತಾ ಪೂಜಾರಿ, ನಯನ ಆರ್.ಕೋಟ್ಯಾನ್, ವರುಣ್ ಚೌಟ, ರಾಜೇಶ್ ಸಾಲಿಯಾನ್ ಬೈಕಂಪಾಡಿ, ಮತ್ತು ಮಂಡಲ ಉಪಾಧ್ಯಕ್ಷರಾದ ವಿಠ್ಠಲ್ ಸಾಲಿಯಾನ್, ಉಸ್ಮಾನ್ ಎನ್ ಬಿ, ಬೂತ್ ಅಧ್ಯಕ್ಷರಾದ ಮೊಹಮ್ಮದ್ ಇಸಾಕ್, ಬಾಲಕೃಷ್ಣ ಶೆಟ್ಟಿ, ಗುತ್ತಿನಾರ್ ಸುಭಾಷ್ ಶೆಟ್ಟಿ, ಸ್ಥಳೀಯ ಜನರು, ಮಸೀದಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/10/2021 07:26 am

Cinque Terre

654

Cinque Terre

0

ಸಂಬಂಧಿತ ಸುದ್ದಿ