ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಾರ್ನಾಡು ಜಂಕ್ಷನ್ ಬಳಿ ಅಪಾಯಕಾರಿ ಹೊಂಡ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಜಂಕ್ಷನ್ ಬಳಿಯ ಸ್ಟುಡಿಯೋ ಎದುರು ಭಾಗದಲ್ಲಿ ಚರಂಡಿಯ ಹಾಸುಕಲ್ಲು ತೆರೆದು ಹೊಂಡ ಉಂಟಾಗಿದ್ದು ಅಪಾಯಕಾರಿಯಾಗಿದೆ.

ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಚರಂಡಿಯಲ್ಲಿ ಅಪಾಯಕಾರಿ ಹೊಂಡ ಗೋಚರಿಸುತ್ತಿದ್ದು ರಾತ್ರಿ ಹೊತ್ತು ಕತ್ತಲೆಯಲ್ಲಿ ಸಂಚರಿಸಲು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ಕೆಲವು ತಿಂಗಳ ಹಿಂದೆ ಕಾರ್ನಾಡ್ ಜಂಕ್ಷನ್ ಬಳಿಯಲ್ಲಿ ಅಪಾಯಕಾರಿ ಹೊಂಡ ಉಂಟಾಗಿದ್ದರೂ ನಗರಪಂಚಾಯತ್ ಗಮನಹರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಅಪಾಯಕಾರಿ ಹೊಂಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ "ಈ ಜೀವ ನಿನಗಾಗಿ ಕಾಯುತ್ತಿದೆ"ಎಂದು ಟ್ರೋಲ್ ಆಗುತ್ತಿದ್ದು ಅಪಾಯ ಸಂಭವಿಸುವ ಮೊದಲೇ ನಗರ ಪಂಚಾಯತ್ ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

25/09/2021 11:35 am

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ