ಮುಲ್ಕಿ:ಕಿನ್ನಿಗೋಳಿ ವಾರದ ಸಂತೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯೀಶ್ ಚೌಟ ನೇತೃತ್ವದಲ್ಲಿ ನೂತನ ಸ್ಪರ್ಶ ದೊರಕಿದ್ದು ನಾಳೆ (ಗುರುವಾರ) ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಎದುರುಗಡೆ ವಾರದ ಸಂತೆಗೆ ಸ್ಥಳ ಗುರುತಿಸಲಾಗಿದ್ದು ಚಾಲನೆ ದೊರಕಲಿದೆ
ಬೆಳೆಯುತ್ತಿರುವ ಕಿನ್ನಿಗೋಳಿಯಲ್ಲಿ ಅದರಲ್ಲೂ ಕಿನ್ನಿಗೋಳಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ವಾರದ ಗುರುವಾರ ಸಂತೆಯ ಸಂದರ್ಭ ವಾಹನ ದಟ್ಟಣೆ ಅಧಿಕವಾಗಿ ಜನ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಮುಖ್ಯಾಧಿಕಾರಿ ಸಾಯೀಶ್ ಚೌಟರವರು ಕಿನ್ನಿಗೋಳಿಯ ಗಣ್ಯ ನಾಗರಿಕರು,ಸೇವಾ ಸಂಸ್ಥೆಗಳ ಪದಾಧಿಕಾರಗಳ ತುರ್ತು ಸಭೆ ನಡೆಸಿ ನೂತನವಾಗಿ ಸಂತೆ ವಹಿವಾಟಿಗೆ ಜಾಗ ಗುರುಟು ಮಾಡಲಾಗಿದೆ.
ಬುಧವಾರ ಪಟ್ಟಣ ಪಂಚಾಯತ್ ವತಿಯಿಂದ ಸ್ಥಳ ಸ್ವಚ್ಛತೆ ಮತ್ತಿನ್ನಿತರ ಪ್ರಕ್ರಿಯೆಗಳು ನಡೆದವು.
ಈ ಹೊಸ ಪರಿಕಲ್ಪನೆಗೆ ಸಂತೆಯಲ್ಲಿನ ಅಂಗಡಿ ಮಾಲಕರು,ಕಾರ್ಮಿಕರು,ಗ್ರಾಹಕರು ಸಹಕರಿಸಬೇಕೆಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ವಿನಂತಿಸಿದ್ದಾರೆ.
ಆದರೆ ನೂತನ ಗುರುವಾರದ ಸಂತೆ ನಡೆಯುವ ಸ್ಥಳ ಕಿನ್ನಿಗೋಳಿ ಬಸ್ಸು ನಿಲ್ದಾಣದಿಂದ ಸುಮಾರು ದೂರದಲ್ಲಿದೆ ಅಲ್ಲದೆ ಪರಿಸರದಲ್ಲಿ ಶಾಲೆಗಳು ಕಾರ್ಯಾಚರಿಸುತ್ತಿದ್ದು ಪುಟ್ಟ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು ಗುರುವಾರದ ನೂತನ ಸ್ಥಳದಲ್ಲಿ ಸಂತೆ ವ್ಯಾಪಾರ ಕುತೂಹಲಕ್ಕೀಡುಮಾಡಿದೆ.
Kshetra Samachara
22/09/2021 09:42 pm