ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಮೇರಿಹಿಲ್‍ನಲ್ಲಿ 14,18,19,22,23 ಮತ್ತು 32 ವಾರ್ಡ್ ಗಳಲ್ಲಿ ದಿನದ 24 ಗಂಟೆ ಕುಡಿಯುವ ನೀರಿನ ಯೋಜನೆಗೆ ಪೂರಕವಾಗಿ ಬೃಹತ್ ಟ್ಯಾಂಕ್ ನಿರ್ಮಾಣಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮಾತನಾಡಿದರು.
ನೀರು ಸರಬರಾಜು ವ್ಯವಸ್ಥೆಯಡಿಯಲ್ಲಿ 20 ಲಕ್ಷ ಲೀಟರ್ ಸಾಮಥ್ಯದ ಜಲ ಸಂಗ್ರಹಗಾರ ನಿರ್ಮಾಣ ಮಾಡಲು 4.82ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಒಂದೂವರೆ ವರ್ಷದ ಒಳಗಾಗಿ ಕಾಮಗಾರಿ ಮುಗಿಯಲಿದ್ದು ಬಳಿಕ ನೀರಿನ ಸರಬರಾಜು ಆರಂಭವಾಗಲಿದೆ.ಒಟ್ಟು 47 ಕಿ.ಮೀ ಪೈಪ್‍ಲೈನ್ ಜೋಡಣೆ ನಡೆಯಲಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು ಪಾಲಿಕೆ, ಗ್ರಾಮಾಂತರ ಪ್ರದೇಶದಲ್ಲಿ ಅನುಷ್ಟಾನಗೊಳಿಸಲು ಮುತುವರ್ಜಿ ವಹಿಸಲಾಗಿದೆ.
ಉಪಮೇಯರ್ ಸುಮಂಗಲಾ ರಾವ್ , ಹಾಗೂ ಸ್ಥಳೀಯ ಕಾರ್ಪರೇಟರ್‍ಗಳಾದ ಜಯಾನಂದ ಅಂಚನ್ , ಗಾಯತ್ರಿ ರಾವ್ , ಸಂಗೀತ ಆರ್ ನಾಯಕ್ , ರಂಜನಿ ಎಲ್. ಕೋಟ್ಯಾನ್, ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
23/08/2021 08:02 pm