ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರಾಪುರ:ಸರಕಾರಿ ಯೋಜನೆಗಳ ನೋಂದಣಿ ಹಾಗೂ ಮಾಹಿತಿ ಶಿಬಿರ

ಸುರತ್ಕಲ್: ಸಮೀಪದ ಚಿತ್ರಾಪುರದಲ್ಲಿ ಶಾಸಕರ ವತಿಯಿಂದ ಹಾಗೂ ನವಮಂಗಳೂರು ಬಂದರು ನಿರ್ವಸಿತರ ಮೊಗವೀರ ನಾಲ್ಕುಪಟ್ಣ ಸಂಯುಕ್ತಸಭಾ ಸಹಭಾಗಿತ್ವದಲ್ಲಿ ಸರಕಾರಿ ಯೋಜನೆಗಳ ನೋಂದಣಿ ಹಾಗೂ ಮಾಹಿತಿ ಶಿಬಿರ ನಡೆಯಿತು.

ಶಿಬಿರವನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು ಸುಮಾರು 78 ಜನರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 39 ಪಿಂಚಣಿ, 37 ಆಧಾರ ಕಾರ್ಡ್, 36 ಈ-ಶ್ರಮ ಕಾರ್ಡ್, 32 ಆರೋಗ್ಯ ಕಾರ್ಡ್ ಹಾಗೂ ರೇಶನ್ ಕಾರ್ಡ್, ಪಹಣಿ ಪತ್ರ ಸೇರಿ ವಿವಿಧ ಯೋಜನೆಗಳ ಸೌಲಭ್ಯ ಕೋರಿ 230 ಕ್ಕೂ ಮಿಕ್ಕಿ ಅರ್ಜಿಗಳು ಬಂದಿದ್ದು ಶಿಬಿರ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಕುಳಾಯಿ ಕಿರುಜೆಟ್ಟಿ ನಿರ್ಮಾಣಕ್ಕೆ ಕೆಲವೊಬ್ಬರು ಒಂದೆರಡು ಬಾರಿ ತಡೆಯಾಜ್ಞೆ ತಂದ ಕಾರಣ ವಿಳಂಬವಾಗುತ್ತಿದೆ. ಆದರೆ ಸರ್ವಋತು ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದೆ. ಮೀನುಗಾರಿಕಾ ಸಚಿವರಾದ ಅಂಗಾರ ಹಾಗೂ ಇಲಾಖಾ ಕಾರ್ಯದರ್ಶಿಯವರ ಜತೆ ಸಂಪರ್ಕದಲ್ಲಿದ್ದು ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇವೆ ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜೆಟ್ಟಿ ನಿರ್ಮಾಣದ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದು ಕೇಂದ್ರದ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದರು. ನಿರ್ವಸಿತರಿಗಿರುವ ಹಕ್ಕುಪತ್ರ, ಸಿಂಗಲ್ ಸೈಟ್ ಸಮಸ್ಯೆ ಪರಿಹಾರ ಕುರಿತಂತೆ ಅಧಿಕಾರಿಗಳಲ್ಲಿ ಚರ್ಚಿಸಲಾಗುವುದು ಎಂದರು.

ಬಿಜೆಪಿ ಸರಕಾರ ಅನೇಕ ಸವಲತ್ತುಗಳನ್ನು ಜನಸಾಮಾನ್ಯರಿಗಾಗಿ ರೂಪಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನಮಾಡುತ್ತದೆ. ಆದರೆ ಸರಕಾರಿ ಕಚೇರಿ ಅಲೆದಾಟದಿಂದ ಹಲವಾರು ಮಂದಿ ಯೋಜನೆ ಪಡೆಯಲು ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜನರ ಬಳಿಗೆ ಸರಕಾರಿ ಅಧಿಕಾರಿಗಳನ್ನು ಕಳಿಸಿ ತ್ವರಿತವಾಗಿ ಯೋಜನೆ ಸೌಲಭ್ಯ ಒದಗಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪಾಲಿಕೆಯ ವಾರ್ಡ್‌ ಗಳಲ್ಲಿ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುವುದು. ಆಯುಷ್ಮಾನ್, ಪಿಂಚಣಿ, ಶ್ರಮಿಕ ಕಾರ್ಡ್ ಸೇರಿದಂತೆ ಹಲವು ಸೌಲಭ್ಯವನ್ನು ಸರಿಯಾದ ದಾಖಲೆ ಪತ್ರವಿದ್ದರೆ ಸ್ಥಳದಲ್ಲೇ ವಿತರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿವೇದಾವತಿ,ಸುಮಿತ್ರ ಕರಿಯಾ,ಕಿರಣ್ ಕುಮಾರ್ ಕೋಡಿಕಲ್,ಶ್ವೇತ ಪೂಜಾರಿ,ಲಕ್ಷ್ಮೀ ಶೇಖರ್ ದೇವಾಡಿಗ,ಮನೋಜ್ ಕುಮಾರ್,ತಹಶೀಲ್ದಾರ್ ಪುರಂದರ ಹೆಗ್ಡೆ,ಉಪತಹಶೀಲ್ದಾರ್ ನವೀನ್ ಕುಮಾರ್, ಗಿರೀಶ್ ಕುಮಾರ್, ಅಧಿಕಾರಿ ವರ್ಗ,ಗುರಿಕಾರರು,ಪದಾಧಿಕಾರಿಗಳು ಉಪಸ್ಥಿತರಿದ್ದರು. ಲಕ್ಷ್ಮಣ್ ಅಮೀನ್ ಮನವಿ ಪತ್ರ ವಾಚಿಸಿದರು. ಮೋಹನ್ ಕೋಡಿಕಲ್ ಸ್ವಾಗತಿಸಿದರು.ಶಶಿಧರ ಕೋಡಿಕಲ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

20/06/2022 07:13 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ