ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದವರಿಂದ ನಡೆದ ಸೇವೆಯಾಟದ ಸಂದರ್ಭ ಮುಂಬೈ ಉದ್ಯಮಿ ಶ್ರೀಮತಿ ಅಮಿತಾ ಆಳ್ವ ಹಾಗೂ ಭಾಸ್ಕರ ಆಳ್ವ ಇವರು ಇತ್ತೀಚಿಗೆ ನಿಧನರಾದ ಖ್ಯಾತ ಭಾಗವತರಾದ ಬಲಿಪ ಪ್ರಸಾದರ ಕುಟುಂಬಕ್ಕೆ ನಿಧಿ ಸಮರ್ಪಣೆ ಮಾಡಿದರು.
ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟರಿಗೆ ಚೆಕ್ ಹಸ್ತಾಂತರಿಸಿದರು. ಇದೇ ಸಂದರ್ಭ ಆನಂದ ರೈ ರೂ 50ಸಾವಿರ ನೀಡುವುದಾಗಿ ತಿಳಿಸಿದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ. ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ರಚನ್ ಆಳ್ವ ಮತ್ತಿತರರಿದ್ದರು. .
Kshetra Samachara
08/05/2022 08:17 pm