ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: "ಮಹಿಳೆಯರು ದೌರ್ಜನ್ಯಗಳ ವಿರುದ್ಧ ಹೋರಾಡುವ ಮನೋಭಾವ ರೂಢಿಸಿಕೊಳ್ಳಬೇಕು"

ಮುಲ್ಕಿ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆ ಹಾಗೂ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ ಸಹಯೋಗದೊಂದಿಗೆ ಸಮುದಾಯದಲ್ಲಿ ಆಗುವ ಮಹಿಳಾ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ಹಾಗೂ ತಡೆಗಟ್ಟುವ ಕಾರ್ಯಗಾರ ಸಂಘದ ಸಭಾಭವನದಲ್ಲಿ ನಡೆಯಿತು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೇಮಸ್ ಯೂತ್ ಕ್ಲಬ್ ನ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್ ವಹಿಸಿದ್ದರು.

ಪಡುಪಣoಬೂರು ಗ್ರಾ ಪಂ ಅಧ್ಯಕ್ಷೆ ಮಂಜುಳಾ ರವರು ಮುಖ್ಯ ಅತಿಥಿಯಾಗಿ ಮಾತನಾಡಿ ಮಹಿಳೆಯರಿಗೆ ಕುಟುಂಬ ಹಾಗೂ ಸಮುದಾಯದಲ್ಲಿ ವಿವಿಧ ಸ್ವರೂಪಗಳಲ್ಲಿ ಹಿಂಸೆ ಹಾಗೂ ದೌರ್ಜನ್ಯ ನಡೆಯುತ್ತಿದ್ದು ದೌರ್ಜನ್ಯಗಳು ನಡೆದರೆ ಭಯಭೀತರಾಗದೆ ಸ್ವಾವಲಂಬಿಯಾಗಿ ಧೈರ್ಯ ದಿಂದ ಮೆಟ್ಟಿ ನಿಲ್ಲುವ ಗುಣಗಳನ್ನು ಮಹಿಳೆಯರು ರೂಢಿಸಿಕೊಳ್ಳಬೇಕು ಮಹಿಳೆಯರ ರಕ್ಷಣೆ ಮಹಿಳೆಯರ ಕೈಯಲ್ಲಿ ಇದೆ ಎಂದು ಗಮನದಲ್ಲಿ ಇಟ್ಟುಕೊಂಡು ಕಾನೂನುಗಳ ಮೂಲಕ ಹೋರಾಟ ನಡೆದರೆ ಮಾತ್ರ ದೌರ್ಜನ್ಯಗಳನ್ನು ಕಡಿಮೆ ಮಾಡಬಹುದು ಎಂದರು

ಪ್ರಜ್ಞಾ ಸಲಹಾ ಕೇಂದ್ರ ದ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ರವರು ಮಾಹಿತಿ ಕಾರ್ಯಗಾರದ ಉದ್ದೇಶ ಹಾಗೂ ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು .

ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಹಿಂದೂ ಕುಷ್ಟ್ ರೋಗ್ ಸಂಘದ ಆಪ್ತ ಸಮಾಲೋಚಕರಾದ ಯೋಗೀಶ್ ಮಲ್ಲಿಗೆ ಮಾಡು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನಡೆಯುವಂತಹ ದೌರ್ಜನ್ಯಗಳ ಬಗ್ಗೆ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿತೋಕೂರು ಫೇಮಸ್ ಯೂತ್ ಕ್ಲಬ್ (ರಿ) ನ ಕಾರ್ಯದರ್ಶಿ ಹಿಮಕರ್ ,ಪಡುಪಣoಬೂರು ಗ್ರಾ ಪಂ ಸದಸ್ಯರುಗಳಾದ ಅನಿಲ್ ಕುಮಾರ್, ಪವಿತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೇವಿಸ್ ಡಿಸೋಜ ಸ್ವಾಗತಿಸಿ ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕ ಪ್ರದೀಪ್ ಕಾಮತ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

28/01/2022 05:01 pm

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ