ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶರನ್ನು ವಜಾಗೊಳಿಸಲು ಆಗ್ರಹ

ಮುಲ್ಕಿ:ರಾಯಚೂರು ಜಿಲ್ಲೆಯಲ್ಲಿ ನಿನ್ನೆ ನಡೆದ ಸಂವಿಧಾನ ದಿನಾಚರಣೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರನ್ನು ಈ ತಕ್ಷಣದಿಂದ ಗೌರವಯುತವಾದ ಜಿಲ್ಲಾ ನ್ಯಾಯಾ ಪೀಠದಿಂದ ವಜಾಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರಾದ ಮಂಜುನಾಥರವರು ಆಗ್ರಹಿಸಿದ್ದಾರೆ

ಅಲ್ಲಿ ನಡೆದ ಘಟನೆಯ ವಿವರ ವಿಡಿಯೋ ನೋಡಿದರೆ ತುಂಬಾ ನೋವು ಉಂಟು ಆಗಿರುತ್ತದೆ ನ್ಯಾಯಾಧೀಶರಿಗೆ ಭಾರತ ಸಂವಿಧಾನದ ಅಡಿಯಲ್ಲಿ ನ್ಯಾಯ ಮಾಡುತ್ತಿದ್ದಾರೆ ಅಥವಾ ಮನುಸ್ಮೃತಿ ಅಡಿಯಲ್ಲಿ ನ್ಯಾಯ ನೀಡುತ್ತಿದ್ದಾರೆ ನಮಗೆ ಒಂದು ಅರ್ಥ ಆಗುತ್ತಿಲ್ಲ ಈ ಭಾರತ ದೇಶದ ಸಂವಿಧಾನ ರಚನೆ ಮಾಡಿರು ತಕ್ಕಂತ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದರೆಂದರೆ ಸಂವಿಧಾನ ವಿರೋಧ ಅಲ್ಲವೇ? ಅಲ್ಲದೆ ಅವರ ಮೇಲೆ ದಲಿತ ದೌರ್ಜನ್ಯ ಕೇಸು ದಾಖಲು ಯಾಕೆ ಮಾಡಬಾರದು?

ಇನ್ನು ಅವರು ನಮ್ಮ ದಲಿತ ವರ್ಗದವರಿಗೆ ಯಾವ ರೀತಿ ನ್ಯಾಯ ನೀಡಿರಬಹುದು ಎಂದು ಅನುಮಾನ ಕಾಡುತ್ತಿದೆ ಆದಕಾರಣ ಇಂಥ ನ್ಯಾಯಾಧೀಶರನ್ನು ಸರಕಾರ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನ ತಕ್ಷಣದಿಂದ ಜಿಲ್ಲಾ ನ್ಯಾಯಾಪೀಠ ದಿಂದ ವಜಾಗೊಳಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನಮ್ಮ ಜಿಲ್ಲಾ ಸಂಘಟನೆಯಿಂದ ಒತ್ತಾಯ ಮಾಡುತ್ತಿದ್ದೇವೆ ಎಂದು ಮಂಜುನಾಥ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ

Edited By : PublicNext Desk
Kshetra Samachara

Kshetra Samachara

27/01/2022 06:41 pm

Cinque Terre

1.37 K

Cinque Terre

0

ಸಂಬಂಧಿತ ಸುದ್ದಿ