ಮುಲ್ಕಿ:ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶ್ರೀ ಕೊರ್ದಬ್ಬು ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ನಡೆಯಿತು. ಕಂಬೆರ್ಲ ದೈವದ ಪುನರ್ ಪ್ರತಿಷ್ಠೆ, ಕಂಬೆರ್ಲ ದೈವದ ದರ್ಶನ ಸೇವೆ, ಶ್ರೀ ರಾಹು ಗುಳಿಗ ದೈವದ ಪ್ರತಿಷ್ಠೆ ಕೊರ್ದಬ್ಬು ಹಾಗೂ ರಾಹುಗುಳಿಗ ದೈವದ ದರ್ಶನ ಸೇವೆ ಸಂಜೆ ಶ್ರೀ ದೈವಗಳ ಭಂಡಾರ ಇಳಿದು ನಂತರ ಅನ್ನಸಂತರ್ಪಣೆ ರಾತ್ರಿ ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭ ದಿನೇಶ್ ಬಂಡ್ರಿಯಾಲ್ ತಾಳಿಪಾಡಿಗುತ್ತು, ಮತ್ತು ಸಂಬಂಧ ಪಟ್ಟ ಗುತ್ತು ಮನೆತನದವರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
26/01/2022 05:50 pm