ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಸುರತ್ಕಲ್ ಕಾನ ರಸ್ತೆ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: ಡಾ. ಭರತ್ ಶೆಟ್ಟಿ

ಸುರತ್ಕಲ್: ಸುರತ್ಕಲ್ ಕಾನ ರಸ್ತೆಯನ್ನು 10 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಮನಪಾ ವ್ಯಾಪ್ತಿಯ ಸುರತ್ಕಲ್ ವಾರ್ಡ್ 2 ರಲ್ಲಿ ಸುಮಾರು 1.30ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಂಕ್ರಟೀಕರಣ ಕಾಮಗಾರಿ ಉದ್ಘಾಟನೆ ಹಾಗೂ ಮೂರು ಹೊಸ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಅವರು ಸೋಮವಾರ ನೆರವೇರಿಸಿ ಮಾತನಾಡಿದರು.

ಈ ಸಂದರ್ಭ ಮಾತನಾಡಿದ ಅವರು ಕೊರೊನಾ ಸಮಸ್ಯೆ ನಡುವೆಯೂ ಅಭಿವೃದ್ಧಿ ಕಾರ್ಯಕ್ಕೆ ಬಂದ ಅನುದಾನದಲ್ಲಿ ನಿರಂತರವಾಗಿ ಕೆಲಸ ಕಾರ್ಯಗಳು ನಡೆಯುತ್ತಿವೆ. ವಾರ್ಡ್ 2ರಲ್ಲಿ ಈಗಾಗಲೇ ಜಲಸಿರಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದು ಇದೀಗ ಒಳ ಚರಂಡಿ, ಮಳೆ ನೀರು ಹರಿಯುವ ತೋಡಿನ ಕೆಲಸ, ರಸ್ತೆಗಳನ್ನು ಸುಸಜ್ಜಿತಗೊಳಿಸುವತ್ತಾ ಗಮನ ಹರಿಸಿದ್ದೇವೆ. ಸರಕಾರದಿಂದ ಬರುವ ವಿವಿಧ ಇಲಾಖೆಗಳ ಅನುದಾನವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಮನಾಪ ಸದಸ್ಯೆ ಶ್ವೇತಾ ಪೂಜಾರಿ, ಶಕ್ತಿ ಕೇಂದ್ರ ಪ್ರಮುಖರಾದ ಸುರೇಂದ್ರ ಸುವರ್ಣ,,ಸಹ ಪ್ರಮುಖರಾದ ರಾಕೇಶ್, ಬೂತ್ ಅಧ್ಯಕ್ಷರಾದ ಸಂತೋಷ್ ತಡಂಬೈಲ್ , ಸಜಿತ್ ರಾಜ್, ರೇಖಾ,ವಿಠಲ್ ದಾಸ್ , ಜಗನ್ನಾಥ ಶೆಟ್ಟಿ , ಪಕ್ಷದ ಪ್ರಮುಖರಾದ ಸುಧಾಕರ್, ಅರುಣ , ಪ್ರಶಾಂತ್ ಶೆಟ್ಟಿ , ಲೋಕನಾಥ್ , ಪದ್ಮನಾಭ, ವರು ಶೆಟ್ಟಿಗಾರ್ ,ಹಿತೇಶ್ , ಪ್ರವೀಣ್,ಧನು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/08/2021 07:59 pm

Cinque Terre

1.84 K

Cinque Terre

0

ಸಂಬಂಧಿತ ಸುದ್ದಿ