ಸುರತ್ಕಲ್: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ವಾರ್ಡ್ 3 ರ ಸಮಗ್ರ ಅಭಿವೃದ್ದಿಗಾಗಿ 40 ಲಕ್ಷದ ಕಾಮಗಾರಿಗೆ ಶಾಸಕರಾದ ಡಾ.ಭರತ್ ಶೆಟ್ಟಿ ಮತ್ತು ಮಹಾ ನಗರ ಪಾಲಿಕೆ ಸದಸ್ಯರಾದ ಲೋಕೇಶ್ ಬೊಳ್ಳಾಜೆ ಯವರಿಂದ ಗುದ್ದಲಿಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯರಾದ ಭಾಸ್ಕರ್ ದೇವಾಡಿಗ,ಮಂಡಲ ಸದಸ್ಯ ಜಯಕುಮಾರ್ ಗಣೇಶಪುರ, ಮಂಡಲ ಕಾರ್ಯದರ್ಶಿ ರಾಘವೇಂದ್ರ ಶೆಣೈ ಮತ್ತಿತರರು ಉಪಸ್ಥಿರಿದರು.
Kshetra Samachara
02/08/2021 10:10 pm