ಮುಲ್ಕಿ ಬಸ್ ನಿಲ್ದಾಣದ ಬಾರ್ ಎದುರುಗಡೆ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಹೊಡೆದಾಡಿಕೊಂಡಿದ್ದು ಸ್ಥಳೀಯರಿಗೆ ಪುಕ್ಕಟೆ ಮನರಂಜನೆ ಸಿಕ್ಕಿದಂತಾಗಿದೆ. ಬಾರ್ ನಲ್ಲಿ ಮದ್ಯ ಸೇವಿಸಿ ಬಂದು ಹೆದ್ದಾರಿ ಬದಿಯ ಸರ್ವಿಸ್ ರಸ್ತೆ ಬಳಿ ಇಬ್ಬರು ಕೂಲಿ ಕಾರ್ಮಿಕರು ಹೊಡೆದಾಡಿಕೊಂಡಿದ್ದಾರೆ.
ಈ ಸಂದರ್ಭ ಕೆಲವರು ಸ್ಥಳಕ್ಕೆ ಧಾವಿಸಿ ಹೊಡೆದಾಟ ಬಿಡಿಸಿದ್ದಾರೆ. ಆದ್ರೆ ಹೊಡೆದಾಟದಲ್ಲಿ ಗಾಯಗೊಂಡ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಮುಲ್ಕಿ ಬಸ್ ನಿಲ್ದಾಣದ ಹೋಟೆಲ್ ಲಾಡ್ಜ್ ಬಳಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಮುಂಜಾನೆ ಹಾಗೂ ಸಂಜೆ ಹೊತ್ತು ಕುಳಿತುಕೊಂಡು ಗುಟ್ಕಾ ಮತ್ತಿತರ ಹಾನಿಕಾರಕ ವಸ್ತುಗಳನ್ನು ಸೇವಿಸಿ ಉಗುಳುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.
ಅಲ್ಲದೇ ಬಾರ್ ನಲ್ಲಿ ಮದ್ಯ ಸೇವಿಸಿ ಬಂದು ಹೊಡೆದಾಟ ನಡೆಯುತ್ತಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಮುಲ್ಕಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಕಟ್ಟಡದ ಮ್ಯಾನೇಜರ್ ಅಬ್ದುಲ್ ಜಲೀಲ್ ಆಗ್ರಹಿಸಿದ್ದಾರೆ.
PublicNext
07/06/2022 05:43 pm