ಮುಲ್ಕಿ:ಸ್ವಾತಂತ್ರ್ಯ ದಿನಾಚರಣೆಯ ಅಮೃತೋತ್ಸವದ ಪ್ರಯುಕ್ತ ಅಗಸ್ಟ್ ತಿಂಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ಆಗಸ್ಟ್ 28 ನೇ ಭಾನುವಾರ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ ಅಭಚಂದ್ರ ರವರ ಮಾರ್ಗದರ್ಶನದಲ್ಲಿ ಬೃಹತ್ ಬೈಕ್ ಜಾಥಾ ನಡೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.
ಅವರು ಹಳೆಯಂಗಡಿ ಯ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂಘಟನಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಮೂಡಬಿದ್ರೆ ಅಲಂಗಾರು ದೇವಸ್ಥಾನದಿಂದ ಹೊರಟ ಜಾಥಾ ಮುಲ್ಕಿ ಬಪ್ಪನಾಡು ಕ್ಷೇತ್ರದಲ್ಲಿ ಸಮಾಪನಗೊಳ್ಳಲಿದೆ.
ಪ್ರತಿ ಬೈಕ್ ನಲ್ಲೂ ರಾಷ್ಟ್ರಧ್ವಜ ರಾರಾಜಿಸಲಿದ್ದು, ಗಳಿಸಿದ ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಸಂದೇಶವನ್ನು ಈ ಜಾತದ ಮೂಲಕ ಸಮಾಜಕ್ಕೆ ನೀಡಲಾಗುವುದು ಎಂದರು.
ಸಭೆಯಲ್ಲಿ ಸಂಘಟನಾ ಸಮಿತಿಯ ಮೋಹನ್ ಕೋಟ್ಯಾನ್, ಎಚ್ ವಸಂತ ಬೆರ್ನಾಡ್, ಪುತ್ತುಬಾವಾ ಮುಲ್ಕಿ, ಬಾಬು ಶೆಟ್ಟಿ ಮಳವೂರು, ಹಸನಬ್ಬ ಬಾಳ, ವೇಣು ವಿನೋದ್ ಶೆಟ್ಟಿ ಚೇಳಾಯರು, ಬಿಜೆ ರಹೀಂ ಬಜಪೆ, ಅಶೋಕ್ ಪೂಜಾರ್, ಮಂಜುನಾಥ ಕಂಬಾರ, ಪದ್ಮಾವತಿ ಶೆಟ್ಟಿ, ಸಾಹುಲ್ ಹಮೀದ್ ಬಜ್ಪೆ, ಯೋಗೀಶ್ ಕೋಟ್ಯಾನ್ ಚಿತ್ರಾಪು, ಜನಾರ್ದನ ಬಂಗೇರ, ಲೀಲ ಕೃಷ್ಣಪ್ಪ , ಬಾಲಚಂದ್ರ ಕಾಮತ್, ಸುರೇಶ್ ಪಂಜ, ಹರಿಯಪ್ಪ ಚೇಳಾಯರು, ಸುನಿಲ್ ಸಿಕ್ವೇರಾ, ಸುರೇಂದ್ರ ಪೆರ್ಗಡೆ, ಟಿಎಚ್ ಮೈಯದಿ ಪುಷ್ಪರಾಜ್ ಅಂಚನ್, ಸೃಜನ್ ಅಂಚನ್, ಸರ್ಫ್ರಾಜ್ ಬಾಳ, ಬಶೀರ್ ಜೋ ಕಟ್ಟೆ, ಅಬ್ದುಲ್ ರಜಾಕ್ ಸೂರಿಂಜೆ, ಮಯ್ಯದಿ ಪಕ್ಷಿಗೆರೆ, ಮೊದಲಾದವರಿದ್ದರು.
Kshetra Samachara
24/08/2022 09:31 am