ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಪ್ರವಾದಿಯ ಅವಹೇಳನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಉಳ್ಳಾಲ: ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ಹಾಗೂ ಮುಡಿಪು ಬ್ಲಾಕ್‌ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತ ಘಟಕದ ವತಿಯಿಂದ ಪ್ರತಿಭಟನೆಯು ಶನಿವಾರ ದೇರಳಕಟ್ಟೆ ಮೈದಾನದಲ್ಲಿ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಮಹಮ್ಮದ್ ಮೋನು ಅವರು, ಪ್ರವಾದಿಯವರು ವಿಶ್ವಕ್ಕೆ ಶಾಂತಿ ಸೌಹಾರ್ದತೆಯನ್ನು ಬಯಸಿದವರು. ಯಾವುದೇ ಜಾತಿ ಧರ್ಮದವರಿಗೆ ನೊವುಂಟು ಮಾಡಲು ಯಾವುದೇ ಧರ್ಮ ಕಲಿಸಿಲ್ಲ.ಕಾನೂನು ಉಲ್ಲಂಘಿಸಿ ಪೈಗಂಬರ್ ಅವರನ್ನು ಅವಹೇಳನಕಾರಿ ಮಾತನಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಧಾರ್ಮಿಕ ಮುಖಂಡ ಅಬ್ದುಲ್ ರಹಿಮಾನ್ ತಬೂಕು ದಾರಿಮಿ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ

ಉಳ್ಳಾಲ್ , ಕೆಪಿಸಿಸಿ ಕಾರ್ಯದರ್ಶಿ ನಾಸೀರ್ ಸಾಮಣಿಗೆ, ಬೆಳ್ಮ ಗ್ರಾಮ ಪಂಚಾಯತಿ ಅಧ್ಯಕ್ಷ ಸತ್ತಾರ್,ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಆಲ್ವಿನ್ ಡಿಸೋಜ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

Edited By :
Kshetra Samachara

Kshetra Samachara

11/06/2022 07:27 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ