ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಸಂಸದ ಅನಂತ್ ಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ನಾಲಾಯಕ್..

ಮಂಗಳೂರು: ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಸಂಸದರಲ್ಲ, ಗ್ರಾಮ ಪಂಚಾಯಿತಿ ಸದಸ್ಯರಾಗಲೂ ಅಯೋಗ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರ ಪದಗ್ರಹಣದ ಭಾವೈಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನದ ಬಗ್ಗೆ ಗೌರವ ಇದ್ದವರ ಕೈಯಲ್ಲಿ ಅಧಿಕಾರವಿದ್ದರೆ ಸಂವಿಧಾನಕ್ಕೆ ಗೌರವ ಬರುತ್ತದೆ. ಆದರೆ, ಸಂವಿಧಾನಕ್ಕೆ ಗೌರವವನ್ನೇ ನೀಡದವರ ಕೈಯಲ್ಲಿ ಈಗ ಆಡಳಿತವಿದೆ. ಆದುದರಿಂದ ಸಂವಿಧಾನಕ್ಕೆ ಗೌರವವೇ ಇಲ್ಲದಂತಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಗೋಮುಖ ವ್ಯಾಘ್ರ. ಅವರು ಪ್ರಧಾನಿಯಾದದ್ದೇ ಸಂವಿಧಾನದಿಂದ. ಆದರೆ, ನಾವು ಆಡಳಿತಕ್ಕೆ ಬಂದದ್ದೇ ಸಂವಿಧಾನವನ್ನು ಬದಲಾಯಿಸಲು ಎಂದು ಹೇಳಿಕೆ ನೀಡಿದ ಅನಂತ ಕುಮಾರ್ ಹೆಗಡೆ ಹಾಗೂ ಅಮಿತ್ ಶಾ ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಜಾತಿ ದ್ವೇಷದ ಅಲೆಯನ್ನು ಹುಟ್ಟು ಹಾಕಿದೆ. ಜಿಲ್ಲೆಯನ್ನು ಕೋಮು ದ್ವೇಷದ ಪ್ರಯೋಗಾಲಯವನ್ನಾಗಿಸಿದ್ದಾರೆ. ಅಂಥವರೂ ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ ಎಂದು ದೂರಿದರು.

56 ಇಂಚಿನ ಎದೆಯುಳ್ಳವರಿಗೆ ದೇಶದ ರೈತರ ಬಗ್ಗೆ ಕಿಂಚಿತ್ತೂ ಹೃದಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. 3 ತಿಂಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಸಮಸ್ಯೆ ಬಗೆಹರಿಸಿಲ್ಲವೇಕೆ? ಎಂದು ಪ್ರಶ್ನಿಸಿದರು.

Edited By : Vijay Kumar
Kshetra Samachara

Kshetra Samachara

22/02/2021 11:16 pm

Cinque Terre

15.8 K

Cinque Terre

1

ಸಂಬಂಧಿತ ಸುದ್ದಿ