ಬಂಟ್ವಾಳ: ಗ್ರಾಪಂಗಳಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರ ಸಾಮರ್ಥ್ಯಾಭಿವೃದ್ಧಿ ತರಬೇತಿ ಬಂಟ್ವಾಳದಲ್ಲಿ ಆರಂಭಗೊಂಡಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜಿರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು, ದ.ಕ. ಜಿಪಂ, ಬಂಟ್ವಾಳ ತಾಪಂ ವತಿಯಿಂದ ತರಬೇತಿ ನಡೆಯುತ್ತಿದೆ. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಅಲಿ ಬೋಳಂತೂರು,ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಜಿ.ಪಂ. ಲೆಕ್ಕಾಧಿಕಾರಿ ಜೀವಲ್ ಖಾನ್, ತಾ.ಪಂ.ವ್ಯವಸ್ಥಾಪಕಿ ಶಾಂಭವಿ, ತರಬೇತುದಾರರಾದ ಮಂಜು ವಿಟ್ಲ, ಮೌನೇಶ ವಿಶ್ವಕರ್ಮ, ಜಯಲಕ್ಷ್ಮೀ ತಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು. ಅನಂತನಾಡಿ, ಅಮ್ಮುಂಜೆ, ಬೋಳಂತೂರು, ಬಡಗಬೆಳ್ಳೂರು ಗ್ರಾ.ಪಂ. ಪ್ರತಿನಿಧಿಗಳು ತರಬೇತಿಯಲ್ಲಿ ಮಂಗಳವಾರದ ಭಾಗವಹಿಸಿದರು. ತರಬೇತುದಾರ ಉಮಾನಾಥ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ಪ್ರಶಾಂತ್ ಬಳಂಜ ಸ್ವಾಗತಿಸಿದರು. ತಾ.ಪಂ.ಸಹಾಯಕ ನಿರ್ದೇಶಕ ಶಿವಾನಂದ್ ವಂದಿಸಿದರು. ತರಬೇತುದಾರ ಫಾರೂಕ್ ಗೂಡಿನಬಳಿ ನಿರೂಪಿಸಿದರು.
Kshetra Samachara
16/02/2021 03:42 pm