ಬಂಟ್ವಾಳ: ಕಾಂಗ್ರೆಸ್ ಹಿರಿಯ ಮುತ್ಸದ್ಧಿ ಬಿ.ಜನಾರ್ದನ ಪೂಜಾರಿ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ, ಕಾಂಗ್ರೆಸ್ ನಿಂದ ಸುಳ್ಯ ದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಡಾ. ರಘು ಅವರ ಮನೆಗಳಿಗೆ ಆರೆಸ್ಸೆಸ್ ಹಿರಿಯ ಧುರೀಣ ಡಾ. ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ನೀಡಿ, ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ನಿಧಿ ಸಂಗ್ರಹ ನಡೆಸಿದರು.
ಈ ಕುರಿತು ಮಾತನಾಡಿದ ಡಾ. ಭಟ್, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಕ್ಕೆಂದು ನಾವು ಮನೆ- ಮನೆಗೆ ತೆರಳುವ ಭಾಗವಾಗಿ ಕಾಂಗ್ರೆಸ್ ಮುಖಂಡರ ಮನೆಗಳಿಗೂ ತೆರಳಿದ್ದೇವೆ. ಪಕ್ಷಬೇಧ ಮರೆತು, ಶ್ರೀ ರಾಮ ಮಂದಿರಕ್ಕಾಗಿ ಅವರು ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ಶ್ರೀರಾಮ ಮಂದಿರ ಭಾರತದ ಅಸ್ಮಿತೆಯ ಸಂಕೇತ, ಮಂದಿರ ನಿರ್ಮಾಣ ಸಮಸ್ತ ಹಿಂದು ಬಾಂಧವರ ಸಂಕಲ್ಪವೂ ಹೌದು ಎಂದರು. ಡಾ. ಕಮಲಾ ಪ್ರಭಾಕರ ಭಟ್, ಅಶೋಕ ಶೆಟ್ಟಿ ಸರಪಾಡಿ ಮತ್ತಿತರ ಮುಖಂಡರು ಡಾ. ಪ್ರಭಾಕರ ಭಟ್ ಜೊತೆಗಿದ್ದರು.
Kshetra Samachara
06/02/2021 09:46 am