ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ನಗರ ಭಾಗದ ರೈಲ್ವೆ ಮಾರ್ಗ ನೈರುತ್ಯ ರೈಲ್ವೆಯಡಿ ಕಾರ್ಯನಿರ್ವಹಿಸಲು ಪ್ರಸ್ತಾಪ

ಮಂಗಳೂರು : ನಗರ ಭಾಗದಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ಮಾರ್ಗಗಳು ಪ್ರಸ್ತುತ ದಕ್ಷಿಣ ರೈಲ್ವೆಯಡಿ ಕಾರ್ಯನಿರ್ವಹಿಸುತ್ತಿದ್ದು ಇದರ ಬದಲಿಗೆ ಈ ರೈಲ್ವೆ ಮಾರ್ಗಗಳನ್ನು ನೈಋತ್ಯ ರೈಲ್ವೆಯಡಿ ಕಾರ್ಯನಿರ್ವಹಿಸುವ ಪ್ರಸ್ತಾವನೆಯನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಮುಂದಿಟ್ಟಿದ್ದಾರೆ.

ಸಂಸತ್‌ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಕ್ಯಾ| ಚೌಟ ಅವರು, ಕರಾವಳಿ ಸಹಿತ ಮಂಗ ಳೂರು- ಬೆಂಗಳೂರು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ದಕ್ಷಿಣ ರೈಲ್ವೆ ವಿಭಾಗದಲ್ಲಿರುವ ಮಂಗಳೂರು ನಗರ ಭಾಗದ ರೈಲ್ವೆಮಾರ್ಗಗಳನ್ನು ನೈಋತ್ಯ ರೈಲ್ವೆ ವ್ಯಾಪ್ತಿಗೆ ತರುವ ಪ್ರಸ್ತಾಪ ರೈಲ್ವೆ ಇಲಾಖೆ ಬಳಿ ಇದೆಯೇ? ಎಂದು ಪ್ರಶ್ನಿಸಿದರು.

ಮಂಗಳೂರು-ಬೆಂಗಳೂರು ಅತ್ಯಂತ ಪ್ರಮುಖ ರೈಲ್ವೆ ಸಂಪರ್ಕವಾಗಿದ್ದು, ಶಿರಾಡಿ ಘಾಟಿಯಲ್ಲಿ ಹಳಿ ವಿಸ್ತರಣೆಗೆ ಸಂಬಂಧಿಸಿ ಸಾಧಕ-ಬಾಧಕಗಳ ಅಧ್ಯಯನ ವರದಿ ಯಾವ ಹಂತದಲ್ಲಿದೆ ಸಹಿತ ವಿವರಗಳನ್ನು ಸಂಸದರು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಸಚಿವರು,ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ನಿರ್ಮಾ ಣವನ್ನು ರಾಜ್ಯ ಸರಕಾರ ಹಾಗೂ ರೈಲ್ವೆ ಸಚಿವಾಲಯದ ಜಂಟಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈ ಸಹಭಾಗಿತ್ವದಲ್ಲಿ ರಾಜ್ಯ ಸರಕಾರದ ಪಾಲು ಬರಬೇಕಿದೆ. ರಾಜ್ಯ ಸರಕಾರದ ಅನುದಾನದ ಪಾಲು ಬಂದರೆ ಈ ಮಾರ್ಗದಮುಂದಿನ ಹಂತದ ಅಭಿವೃದ್ಧಿಕಾಮಗಾರಿಗಳನ್ನು ಮುಂದುವರಿಸಲು ಸಾಧ್ಯವಾಗಲಿದೆ ಎಂದರು.

Edited By : PublicNext Desk
PublicNext

PublicNext

13/12/2024 03:13 pm

Cinque Terre

3.08 K

Cinque Terre

0

ಸಂಬಂಧಿತ ಸುದ್ದಿ