ಸುಳ್ಯ: ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಆದರೆ ಈ ಅಚ್ಚರಿಯ ಬೆಳವಣಿಗೆಗೆ ಮಹಿಳೆಯೊಬ್ಬರು ಕಾರಣವೇ ಎನ್ನುವ ಪ್ರಶ್ನೆ ಎದ್ದಿದೆ.
ಹೌದು. ಕೊಡಿಯಾಲ ನಿವಾಸಿ ಕುಂಟುಪುಣಿ ಹಾಲು ಉತ್ಪಾದಕ ಸೊಸೈಟಿಯ ನಿರ್ದೇಶಕಿ ನೀರಜಾಕ್ಷಿ ಅವರು ಶಾಸಕ ಅಂಗಾರ ಅವರಿಗೆ ಮಂತ್ರಿಗಿರಿ ನೀಡಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಅಂಗಾರ ಶಾಸಕರಾದ ಬಳಿಕ ಮೂಲ ಸೌಕರ್ಯಗಳು ಗ್ರಾಮಾಂತರ ಪ್ರದೇಶಕ್ಕೂ ತಲುಪುವಂತಾಗಿದೆ. ಅವರಿಗೆ ಸಚಿವ ಪದವಿ ನೀಡಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದರು.
ಪತ್ರದ ಪ್ರತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಅವರಿಗೂ ಕಳುಹಿಸಿದ್ದರು.
Kshetra Samachara
14/01/2021 04:08 pm