ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮತ ಎಣಿಕೆ ಸಂದರ್ಭ ನಿಯಮ ಪಾಲನೆ ಕಡ್ಡಾಯ; ತಹಸೀಲ್ದಾರ್

ಬಂಟ್ವಾಳ: ಮತ ಎಣಿಕೆ ಸಂದರ್ಭ ಎಣಿಕೆ ಕೇಂದ್ರದಲ್ಲಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಅಭ್ಯರ್ಥಿಗಳಿಗೆ ಹಾಗೂ ಏಜೆಂಟರಿಗೆ ಬಂಟ್ವಾಳ ತಹಸೀಲ್ದಾರ್ ಅನಿತಾಲಕ್ಷ್ಮೀ ಸೂಚಿಸಿದ್ದಾರೆ.

ಮತ ಎಣಿಕೆ ಕೊಠಡಿಯೊಳಗೆ ಅಭ್ಯರ್ಥಿ ಅಥವಾ ಒಬ್ಬ ಏಜೆಂಟರಿಗೆ ಮಾತ್ರ ಅವಕಾಶ. ಚುನಾವಣಾಧಿಕಾರಿ ಸಹಿಯುಳ್ಳ ಭಾವಚಿತ್ರದ ಸಹಿತ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ತರತಕ್ಕದ್ದು. ಅವಶ್ಯವಿದ್ದಲ್ಲಿ ಸಂಬಂಧಪಟ್ಟವರಿಗೆ ತೋರಿಸತಕ್ಕದ್ದು. ಮೊಬೈಲ್ ಹಾಗೂ ತತ್ಸಮಾನ ಸ್ಮಾರ್ಟ್ ವಾಚ್, ಯಾವುದೇ ಮಾರಕ ಆಯುಧಗಳನ್ನು ಮತ ಎಣಿಕೆ ಕೇಂದ್ರದ ಒಳಗೆ ತರಲು ನಿಷೇಧಿಸಲಾಗಿದೆ.

ಒಮ್ಮೆ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿದ ನಂತರ ಹೊರಗೆ ಹೋದರೆ ಮರು ಪ್ರವೇಶಕ್ಕೆ ಅವಕಾಶವಿಲ್ಲ. ಎಣಿಕೆ ಕೇಂದ್ರದಲ್ಲಿ ಕೊಠಡಿಯ ಒಳಗೆ ಆ ಕ್ಷೇತ್ರದ ಅಭ್ಯರ್ಥಿ ಅಥವಾ ಏಜೆಂಟ್ ಮಾತ್ರ ಪ್ರವೇಶಿಸಬೇಕು. ಎಣಿಕೆ ನಂತರ ಎಲ್ಲರೂ ಎಣಿಕೆ ಕೊಠಡಿಯಿಂದ ಹೊರಗೆ ಬರಬೇಕು ಮತ್ತು ವಿಜೇತ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ಎಣಿಕೆ ಕೇಂದ್ರವನ್ನು ಕೂಡಲೇ ತೊರೆಯತಕ್ಕದ್ದು. ವಿಜೇತ ಅಭ್ಯರ್ಥಿಗಳಿಗೆ ಪಂಚಾಯತುವಾರು ಚುನಾವಣಾಧಿಕಾರಿಗಳು ಪ್ರಮಾಣ ಪತ್ರವನ್ನು ನೀಡುತ್ತಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಚುನಾವಣಾ ಎಣಿಕೆ ಕೇಂದ್ರದ ಒಳಗೆ ಮತ್ತು 500 ಮೀಟರ್ ಅಂತರದಲ್ಲಿ ಯಾವುದೇ ವಿಜಯೋತ್ಸವ ಹಾಗೂ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಸರಕಾರದ ಮಾರ್ಗಸೂಚಿಯನ್ವಯ ಕೋವಿಡ್ ನಿಯಮಾವಳಿಯನ್ನು ಕಡ್ಡಾಯ ಪಾಲಿಸಬೇಕು. ನಿಯಮವನ್ನು ಪಾಲಿಸದಿದ್ದಲ್ಲಿ ಅಂತಹ ವ್ಯಕ್ತಿಯ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಎಣಿಕೆ ಕೇಂದ್ರದಿಂದ ಹೊರಕ್ಕೆ ಹಾಕಲಾಗುವುದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

29/12/2020 09:02 pm

Cinque Terre

8.5 K

Cinque Terre

1

ಸಂಬಂಧಿತ ಸುದ್ದಿ