ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ರೆ ಯಾವುದೇ ಸಮಸ್ಯೆ ಇಲ್ಲ. ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಗಲಾಟೆ ಎಬ್ಬಿಸಿದ್ರೆ ಇವರಿಗೆ ತೊಂದರೆ ಇಲ್ಲ. ಗಾಂಧಿ ಕೊಂದವನನ್ನ ವೈಭವೀಕರಿಸಿದ್ರೆ ಇವರಿಗೆ ತೊಂದರೆ ಇಲ್ಲ. ಆದರೆ ಪಠ್ಯ ಪುಸ್ತಕ ವಿಚಾರದಲ್ಲಿ ಮಾತನಾಡಿದ್ರೆ ಇವರಿಗೆ ಅದು ವಿರೋಧ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವರ ಮನೆ ಎದುರು ಸಾಂಕೇತಿಕ ಪ್ರತಿಭಟನೆ ಮಾಡಿದ್ರೆ ಬಂಧಿಸ್ತಾರೆ. ಅವರೇನು ಸಚಿವರ ಮಂಡೆ ತಂದು ಸುಟ್ಟು ಹಾಕಿದ್ರಾ? ವಿದ್ಯಾರ್ಥಿಗಳ ಮೇಲೆ ದೊಡ್ಡ ಕೇಸ್ ಹಾಕೋದು ಸರಿಯಾ? ಹಿಜಾಬ್ ವಿಷಯದಲ್ಲಿ ಸಮಸ್ಯೆ ಇದ್ರೆ ವಿದ್ಯಾರ್ಥಿನಿಯರು ಕೋರ್ಟ್ ಗೆ ಹೋಗಲಿ ಎಂದ ಅವರು, ಡಿಸಿ, ವಿಸಿ ಬಳಿ ಆಗದೇ ಇದ್ರೆ ಕಾನೂನು ಹೋರಾಟ ಮಾಡಲಿ. ಸಮಾಜದಲ್ಲಿ ಗೊಂದಲ ಸೃಷ್ಡಿಸಬಾರದು, ಈ ದೇಶದ ಕಾನೂನು ಗೌರವಿಸಬೇಕು. ಇವರು ಈ ದೇಶದಲ್ಲಿ ಇದ್ದು ಮಾತನಾಡ್ತಾರೆ. ಆದರೆ ಇವರೆಲ್ಲಾ ವಿದೇಶಕ್ಕೆ ಹೋಗಲಿ. ಪಾಕಿಸ್ತಾನ, ಸೌದಿಗೆ ಹೋಗಿ ಮಾತನಾಡಲಿ, ಅಲ್ಲಿ ಆಗ್ತದಾ ನೋಡುವಾ?. ಈ ದೇಶದಲ್ಲಿ ಮಾತನಾಡೋಕೆ ಅವಕಾಶ ಇದೆ. ಅಲ್ಲಿ ಅದೂ ಇಲ್ಲ. ಹಾಗಾಗಿ ಈ ದೇಶದ ಕಾನೂನು ಗೌರವಿಸೋ ಕೆಲಸ ಮಾಡಿ ಎಂದರು.
ಈ ವರ್ಷದ ಮಧ್ಯೆ ಸಿಂಡಿಕೇಟ್ ನಿರ್ಧಾರ ಮಾಡಿದ್ದು ತಪ್ಪಾ? ಸರಿಯಾ ಅನ್ನೋದು ಪ್ರಶ್ನೆ. ಇದೊಂದು ತಾಂತ್ರಿಕ ಸಮಸ್ಯೆ, ಇದನ್ನ ಡಿಸಿ ಕೂತು ಪರಿಹರಿಸಲಿ. ವಿದ್ಯಾರ್ಥಿನಿಯರಲ್ಲಿ ದ್ವಂದ್ವ ಇದ್ದರೆ ಪೋಷಕರು ನಿರ್ಧಾರ ತೆಗೆದುಕೊಳ್ಳಲಿ. ರಾಜಕೀಯವಾಗಿ ಈ ಮಕ್ಕಳು ದಾರಿ ತಪ್ಪುತ್ತಿದ್ದಾರಾ ಅಂತ ಹೆತ್ತವರು ನೋಡಲಿ. ಆ ವಿದ್ಯಾರ್ಥಿನಿಯರು ನನ್ನ ಜೊತೆ ಫೋನ್ ನಲ್ಲಿ ಮಾತನಾಡಿದ್ರು. ಆ ಮೇಲೆ ನಾನೇ ಕರೆ ಮಾಡಿದಾಗ ಅವರು ಕಾಲ್ ತೆಗೆದಿಲ್ಲ ಎಂದರು. ಇನ್ನು ಉಪ್ಪಿನಂಗಡಿ ಹಿಜಾಬ್ ಕೇಸಲ್ಲಿ ಅಲ್ಲಿನ ಶಾಸಕರ ಜೊತೆ ಮಾತನಾಡಿದ್ದೇನೆ. ವಿವಿ ಸಿಂಡಿಕೇಟ್ ನಿರ್ಣಯ ಕಾನೂನು ವ್ಯಾಪ್ತಿಯಲ್ಲಿ ಇದ್ಯಾ ನೋಡಲಿ. ಇಲ್ಲದೇ ಇದ್ರೆ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಲಿ ಅಂದರು.
PublicNext
06/06/2022 01:06 pm