ಮುಲ್ಕಿ: ಸುರತ್ಕಲ್ ಸಮೀಪದ ಮಧ್ಯ ಶ್ರೀ ಖಡ್ಗೇಶ್ವರಿ ದೇವಸ್ಥಾನಕ್ಕೆ ಕೊರೊನಾ ಮಹಾಮಾರಿಯ ಬಳಿಕ ಬಸ್ ಸಂಪರ್ಕ ಇಲ್ಲದೆ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು ಸರಕಾರಿ ಬಸ್ ಒದಗಿಸಬೇಕೆಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ನಾಗರಿಕ ಸಮಿತಿ ಮಂಗಳೂರು ತಾಲೂಕು ವತಿಯಿಂದ ಮನವಿಯನ್ನು ಶಾಸಕರ ಕಚೇರಿಯಲ್ಲಿ ಸಲ್ಲಿಸಲಾಯಿತು.
ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರು, ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅವರಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಹೊಸ ಸರಕಾರಿ ಬಸ್ ಹಾಕಲು ಸಾಧ್ಯವಿಲ್ಲದ ಕಾರಣ ಪ್ರಸ್ತುತ ಎನ್ ಐಟಿಕೆ ವರೆಗೆ ಬರುವ ಬಸ್ ನ್ನು ದೇವಸ್ಥಾನದವರೆಗೂ ವಿಸ್ತರಿಸಿ ತಕ್ಷಣ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.
ನಿಯೋಗದಲ್ಲಿ ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ತಾಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
28/10/2020 04:21 pm