ಬಂಟ್ವಾಳ: ಬೆಳ್ತಂಗಡಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಮತ್ತು ಶಾಸಕ ಹರೀಶ್ ಪೂಂಜ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆಪಾದಿಸಿರುವ ಎಸ್.ಡಿ.ಪಿ.ಐ., ಈ ಕುರಿತು ಬಂಟ್ವಾಳ ನಗರ ಠಾಣಾಧಿಕಾರಿಗಳಿಗೆ ದೂರು ನೀಡಿದೆ.
ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಮತ್ತು ಸಚಿವ ಈಶ್ವರಪ್ಪ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಬಂಟ್ಟಾಳ ನಗರ ಠಾಣಾಧಿಕಾರಿಗಳಿಗೆ ಭಾಷಣದ ವೀಡಿಯೊ ಸಿ.ಡಿ. ಲಗತ್ತಿಸಲ್ಪಟ್ಟ ದಾಖಲೆಗಳೊಂದಿಗೆ ಎಸ್.ಡಿ.ಪಿ.ಐ. ಬಂಟ್ಟಾಳ ಕ್ಷೇತ್ರ ಸಮಿತಿ ಸದಸ್ಯರಾದ ಮೂನೀಶ್ ಆಲಿ ದೂರು ನೀಡಿದರು.
ಈ ಸಂದರ್ಭ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್., ಕ್ಷೇತ್ರ ಅಧ್ಯಕ್ಷ ಯೂಸುಫ್ ಆಲಡ್ಕ, ಕ್ಷೇತ್ರ ಜೊತೆ ಕಾರ್ಯದರ್ಶಿ ಸಲೀಂ ಆಲಾಡಿ ಮತ್ತು ಮಲಿಕ್ ಕೊಲಕೆ ಉಪಸ್ಥಿತರಿದ್ದರು.
Kshetra Samachara
10/02/2021 08:32 pm