ಬಂಟ್ವಾಳ: ಗ್ರಾಪಂ ಚುನಾವಣೆ ಸಂದರ್ಭ ತನ್ನ ಪತಿ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿ ಎಂದು ಪತ್ನಿಯೇ ಹೇಳಿದ ಪ್ರಕರಣ ಬಂಟ್ವಾಳ ತಾಲೂಕಿನ ಅನಂತಾಡಿ ಎಂಬಲ್ಲಿ ಶನಿವಾರ ನಡೆದಿದೆ.
ನಾಮಪತ್ರ ಸಲ್ಲಿಸಿದ ವ್ಯಕ್ತಿಯ ವಿರುದ್ಧ ಕೆಲವು ಪ್ರಕರಣಗಳು ಇದ್ದು, ಈ ಹಿನ್ನೆಲೆಯಲ್ಲಿ ತಿರಸ್ಕರಿಸಬೇಕು ಎಂದು ಅವರ ಪತ್ನಿ ಮತ್ತು ಕೆಲವರು ಆಗಮಿಸಿ ಆಕ್ಷೇಪ ಸಲ್ಲಿಸಿದರು. ಈ ಕುರಿತು ಅವರು ದೂರನ್ನೂ ನೀಡಿದ್ದಾರೆ. ಆದರೆ, ಅಭ್ಯರ್ಥಿ ಅಪರಾಧಿ ಎಂದು ಯಾವುದೇ ಘೋಷಣೆ ಆಗದೇ ಇರುವ ಕಾರಣ ತಿರಸ್ಕೃತವಾಗಿಲ್ಲ.
Kshetra Samachara
12/12/2020 09:57 pm