ಮಂಗಳೂರು: ಮಹಾನಗರ ಪಾಲಿಕೆಯ ಬಿಜೈ ವಾರ್ಡಿನ ಬಿಜೈ ನ್ಯೂರೋಡ್ ಹೌಸಿಂಗ್ ಕಾಲೊನಿ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಬಿಜೈ ನ್ಯೂರೋಡ್ ಹೌಸಿಂಗ್ ಕಾಲೊನಿ ನಿವಾಸಿಗಳು ಸ್ಥಳೀಯ ಮುಖಂಡರ ಜೊತೆಗೆ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿ ಮನವಿ ಸಲ್ಲಿಸಿದ್ದರು.
ಆ ಪ್ರಕಾರ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಶೆಟ್ಟಿ ಬೋಳೂರು, ಬಿಜೆಪಿ ಮುಖಂಡರಾದ ಅಜಯ್, ಪ್ರಶಾಂತ್ ಆಳ್ವ, ಕಾರ್ತ್ಯಾಯಿನಿ ರಾವ್, ವಸಂತ್ ಜೆ.ಪೂಜಾರಿ, ಬಾಳ ಯತೀಶ್ ಶೆಟ್ಟಿ, ವಿಜಯೇಂದ್ರ, ರಾಧಾಕೃಷ್ಣ, ದಯಾನಂದ್, ಭರತ್ ಶೆಟ್ಟಿ, ವಿದ್ಯಾ ಶೆಣೈ, ಮಂಜು, ಮನೋಜ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
13/11/2020 06:59 pm