ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಏಕಕಾಲದಲ್ಲಿ ರಸ್ತೆ ಬಂದ್, ಟ್ರಾಫಿಕ್ ಕಿರಿಕಿರಿ: ಇದೇನಾ ತುಘಲಕ್ ದರ್ಬಾರ್ ಸ್ಮಾರ್ಟ್ ಸಿಟಿ ಕಾಮಗಾರಿ?'

ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಅಸಮಾಧಾನ ಹೊರ ಹಾಕಿದ್ದು, ಬಿಜೆಪಿ ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಏಕಕಾಲದಲ್ಲಿ ರಸ್ತೆ ಬಂದ್, ಟ್ರಾಫಿಕ್ ಕಿರಿಕಿರಿ, ಇದೇನು ಸ್ಮಾರ್ಟ್ ಸಿಟಿ ಕಾಮಗಾರಿಯೋ ಅಥವಾ ತುಘಲಕ್ ದರ್ಬಾರ್ ಕಾಮಗಾರಿಯೋ. ಮಂಗಳೂರಿನಲ್ಲಿ ಸುಮಾರು ಎರಡು ದಿನಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಏಕಕಾಲದಲ್ಲಿ ರಸ್ತೆ ಬಂದ್, ಟ್ರಾಫಿಕ್ ಸಮಸ್ಯೆ ಸೇರಿದಂತೆ ವಿವಿಧ ತೊಂದರೆಯನ್ನು ಜನರು ಎದುರಿಸುತ್ತಿದ್ದಾರೆ. ಸ್ಮಾರ್ಟ್ ಸಿಟಿ ಮಾಡುತ್ತಿರುವುದು ಒಳ್ಳೆ ವಿಚಾರ. ಆದರೆ ಅದರಿಂದ ಜನರಿಗೆ ತೊಂದರೆ ಆಗಬಾರದು' ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಎರಡು ಆ್ಯಂಬುಲೆನ್ಸ್‌ಗಳು ಸೋಮವಾರ ಸುಮಾರು ಒಂದೂವರೆ ಗಂಟೆ ಪರದಾಡಿವೆ. ಇಂತಹ ಘಟನೆಯಿಂದಾಗಿ ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ತಕ್ಷಣವೇ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಂಪೂರ್ಣ ವಿವರವನ್ನು ಪಡೆಯ ಜಿಲ್ಲಾಧಿಕಾರಿಗಳಿಗೆ ನೀಡಬೇಕು‌ ಮತ್ತು ಅದನ್ನು‌ ಜನರಿಗೂ ತಿಳಿಸಬೇಕು‌ ಇಲ್ಲವಾದಲ್ಲಿ‌ ಮಂಗಳೂರು ಸ್ಥಿತಿ ಕೆಟ್ಟುಹೋಗುತ್ತದೆ ಎಂದು ಹೇಳಿದ್ದಾರೆ.

Edited By : Vijay Kumar
Kshetra Samachara

Kshetra Samachara

10/11/2020 06:36 pm

Cinque Terre

4.43 K

Cinque Terre

2

ಸಂಬಂಧಿತ ಸುದ್ದಿ