ಮುಲ್ಕಿ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೈಕಂಬ ಮಾರ್ಕೆಟ್ ನ ರಿಕ್ಷಾಸ್ಟ್ಯಾಂಡ್ ನಿರ್ಮಾಣಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.
ಮಹಾ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಕುಂಜತ್ತಬೈಲ್, ಪಾಲಿಕೆ ಸದಸ್ಯ ಲೋಹಿತ್ ಅಮೀನ್, ಮಂಡಲ ಉಪಾಧ್ಯಕ್ಷರಾದ ಅಮೃತ್ ಜೋಯ್ಸ್ ಡಿಸೋಜ, ಸೋಮಯ್ಯ, ಮಂಡಲ ಕಾರ್ಯದರ್ಶಿ ಶೋಧನ್ ಅದ್ಯಪಾಡಿ, ರೈತ ಮೋರ್ಚಾ ಪ್ರಮುಖರಾದ ಥಾಮಸ್ ಸಿಕ್ವೇರಾ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ,ಪ್ರಧಾನ ಕಾರ್ಯದರ್ಶಿ ರಾಜೇಶ್, ರಿಕ್ಷಾ ಯೂನಿಯನ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
Kshetra Samachara
26/10/2020 10:08 pm