ಮುಲ್ಕಿ: ಮುಲ್ಕಿ ಜೆಸಿಐ ಶಾಂಭವಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿಣಾಚರಣೆ-2022ರ ಅಂಗವಾಗಿ ಮುಲ್ಕಿ ನಗರ ಪಂಚಾಯತ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಲ್ಕಿ ಲಯನ್ಸ್ ಕ್ಲಬ್ ನ ಮಾಜೀ ಅಧ್ಯಕ್ಷೆ ಶಿಲ್ಪಾ ಪ್ರಭೊದ್ ಕುಡ್ವ ಮತ್ತು ಜೆಸಿಐನ ಮಹಿಳಾ ಸಬಲೀಕರಣದ ವಲಯ ನಿರ್ದೇಶಕಿ ಜ್ಯೋತಿ ಪ್ರಶಾಂತ್ ರನ್ನು ಸನ್ಮಾನಿಸಲಾಯಿತು.
ಕೋವಿಡ್ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ನಗರ ಪಂಚಾಯತ್ ನ ಮಹಿಳಾ ಸಿಬಂದಿಗಳನ್ನು ಗೌರವಿಸಲಾಯಿತು.
ಸಾಧಕರನ್ನು ಸನ್ಮಾನಿಸಿ ಮುಲ್ಕಿ ನಪಂ ಅಧಿಕಾರಿ ಚಂದ್ರಪೂಜಾರಿ ಮಾತನಾಡಿ ಕೋವಿಡ್ ದಿನಗಳಲ್ಲಿ ಮಹಿಳಾ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದ್ದು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ ಎಂದರು.
ಮುಲ್ಕಿ ಜೆಸಿಐ ಶಾಂಭವಿ ಅಧ್ಯಕ್ಷ ಕಲ್ಲಪ್ಪ ತಡವಲಗ ಅಧ್ಯಕ್ಷತೆಯನ್ನು ವಹಿಸಿದ್ದರು. ಜೆಸಿಐನ ವಲಯ ಉಪಾಧ್ಯಕ್ಷ ದಿನೇಶ್ ಕೆ ಶೆಟ್ಟಿ, ಮಾಜೀ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,ಲ.ಪ್ರತಿಭಾ ಹೆಬ್ಬಾರ್,ಲ.ವೆಂಕಟೇಶ ಹೆಬ್ಬಾರ್,ಮೂಲ್ಕಿ ನ ಪಂ ಸದಸ್ಯ ಪುತ್ತು ಬಾವು, ಜೆಸಿಐ ಕಾರ್ಯದರ್ಶಿ ವಿಶ್ವನಾಥ ಶೆಣ್ಯೆ ಮತ್ತಿತರರು ಉಪಸ್ತಿತರಿದ್ದರು.
Kshetra Samachara
08/03/2022 08:30 pm