ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ, ಹಾಗೂ ಹೋಲಿ ರೋಸರಿ ಪ್ರೌಢಶಾಲೆ ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ 2022-23 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟವನ್ನು ಬುಧವಾರ ಹೋಲಿರೋಸರಿ ಪ್ರೌಢಶಾಲೆಯಲ್ಲಿ ಸಿಸ್ಟರ್ ಪ್ರಿಯಾ ಮರಿಯಾ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗೆಲ್ಲುವ ಛಲ, ಆತ್ಮವಿಶ್ವಾಸವನ್ನು ಹೊಂದಿರುವ ಆಟಗಾರ ಎಂದಿಗೂ ತನ್ನನ್ನು ತಾನು ಬಿಟ್ಟುಕೊಡುವುದಿಲ್ಲ. ಅದಲ್ಲದೇ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಕ್ರೀಡೆಯು ಉತ್ತಮ ಮೌಲ್ಯಗಳನ್ನು ರೂಪಿಸಿಕೊಳ್ಳುವ ಅತ್ಯುತ್ತಮ ಸಾಧನ ಎಂದರೆ ತಪ್ಪಗಲಾರದು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ತೆಂಗಿನ ಕಾಯಿ ಒಡೆಯುವ ಮುಖೇನ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿ, ಮಾತನಾಡಿ ನಮ್ಮ ಬೆಳವಣಿಗೆಗೆ ಪೂರಕವಾಗಿರುವುದೇ ಕ್ರೀಡೆ. ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣ ಬರುವುದೇ ಕ್ರೀಡೆಯಿಂದ, ಆದ್ದರಿಂದ ಕಬ್ಬಡಿಯಲ್ಲಿ ನಾಯಕತ್ವದ ಗುಣ ಹೆಚ್ಚು ಬರುತ್ತದೆ. ಈ ಪಂದ್ಯಾಟದಲ್ಲಿ ಆಟಗಾರನೂ ರೈಡ್ ಮಾಡಬೇಕಾದರೆ ಮುನ್ನುಗ್ಗಿ ಹೋಗಿ ಎದುರಾಳಿಯ ಮುಂದೆ ಮುನ್ನುಗ್ಗುತ್ತಾನೆ. ಇದರಿಂದ ಕ್ರೀಡಾಪಟುವಿನಲ್ಲಿ ನಾಯಕತ್ವದ ಗುಣ ಬರುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಪೈ, ಹಳೆವಿದ್ಯಾರ್ಥಿ ಹಾಗೂ ಉದ್ಯಮಿ ಆವಿಷ್ ಮಾತನಾಡಿ, ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳಿ ಎಂದು ಶುಭಹಾರೈಸಿದರು.
ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ದೈಹಿಕ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುನೀಲ್ ಮಿರಾಂದ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ರಾಜಶ್ರೀ, ಹಳೆ ವಿದ್ಯಾರ್ಥಿ ಅಕ್ರಂ ಶೇನ್, ನಿವೃತ್ತ ಶಿಕ್ಷಕಿ ಹೆಲೆನ್ ಮಥಾಯಸ್, ಶಿಕ್ಷಕ ಸಂಘದ ಅಧ್ಯಕ್ಷ ಶಿವಾನಂದ ಕಾಯ್ಕಿಣಿ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ರೇವತಿ, ಕರುಣಾಕರ ಶೆಟ್ಟಿ, ಕ್ರೀಡಾಪಡುಗಳು, ತೀರ್ಪುಗಾರರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಟೆಲ್ಮಾ ಡೋರಾ ಡಿಸೋಜಾ ಸ್ವಾಗತಿಸಿ, ಸಹ ಶಿಕ್ಷಕಿ ಸಿಸಿಲಿಯಾ ಡಿಸೋಜಾ ನಿರೂಪಿಸಿ ರಾಮಕೃಷ್ಣ ಶಿರೂರು ಧನ್ಯವಾದಗೈದರು.
Kshetra Samachara
14/09/2022 05:35 pm