ಮೂಡುಬಿದಿರೆ: ಪ್ರಾವಿಡೆಂಟ್ ಫಂಡ್ ಪಿಂಚಣಿದಾರರ ಮೂಡುಬಿದಿರೆ ತಾಲೂಕು ಸಮಾವೇಶವು ಮಂಗಳವಾರ ಸ್ವರ್ಣ ಮಂದಿರದಲ್ಲಿ ನಡೆಯಿತು.
ಪಿಂಚಣಿದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಸುಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಬೀಡಿ ಕಾರ್ಮಿಕರಿಗೆ ಪಿಂಚಣಿಯ ಅಗತ್ಯವಿದೆ. ಪ್ರಾವಿಂಡೆಂಟ್ ಫಂಡ್ ಪೆನ್‌ಷನ್ ವ್ಯಾಪ್ತಿಯಲ್ಲಿ ದೇಶದಾದ್ಯಂತ ೭೮ಲಕ್ಷ ಪಿಂಚಣಿದಾರರಿದ್ದಾರೆ. 2014ರಲ್ಲಿ ಕನಿಷ್ಠ ಪಿಂಚಣಿ ನಿಗದಿಯಾಗಿರುತ್ತದೆ ಆನಂತರ ಕಳೆದ 8ವರ್ಷಗಳಿಂದ ಪಿಂಚಣಿ ಏರಿಕೆಯಾಗಿರುವುದಿಲ್ಲ. ಕನಿಷ್ಠ ಕೂಲಿ 18,000 ಇರಬೇಕು ಅದರಂತೆ ಕನಿಷ್ಟ ಪಿಂಚಣಿಯು ತಿಂಗಳಿಗೆ 9,000ನಿಗದಿ ಪಡಿಸಬೇಕು ಮತ್ತು ತುಟ್ಟಿ ಭತ್ತೆಯನ್ನು ಅನ್ವಯಿಸಬೇಕು, ಕೋಶಿಯಾರಿ ಕಮಿಟಿ ಶಿಫಾರಸಿನಂತೆ ರೂ 3000ವನ್ನು ಕೂಡಲೇ ಜಾರಿ ಮಾಡಬೇಕು, ಪೆನ್ಸನ್‌ದಾರರಿಗೆ ಅನುಕೂಲವಾಗಿ ಬಂದ ಎಲ್ಲಾ ಕೋರ್ಟು ತೀರ್ಪುಗಳನ್ನು ಜಾರಿ ಮಾಡಬೇಕು, ಪೆನ್ಸನ್ ದಾರರ ವಿರುದ್ಧ ಕೋರ್ಟ್‌ನಲ್ಲಿ ಹಾಕಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯಬೇಕು ಹಾಗೂ ಪೆನ್ಸನ್ ಲೆಕ್ಕ ಹಾಕುವ ವಿಧಾನವನ್ನು ರದ್ದುಗೊಳಿಸಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂ ದು ಕರೆ ನೀಡಿದರು.
ಪಿಂಚಣಿದಾರರ ಮೂಡುಬಿದಿರೆ ತಾಲೂಕು ಅಧ್ಯಕ್ಷ ರಮಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ್ ಶೆಟ್ಟಿ ಮಾತನಾಡಿ ಬೀಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ರಾಜ್ಯದಲ್ಲಿ ಕೆಂಬಾವುಟದ ಪಕ್ಷ ಹೊರತು ಪಡಿಸಿ ಯಾವುದೇ ಪಕ್ಷಗಳು ಧ್ವನಿ ಎತ್ತಿಲ್ಲ. ಕಾರ್ಮಿಕರ ಮತ್ತು ರೈತರ ಬಗ್ಗೆ ಕೆಂಬಾವುಟ ಮಾತ್ರ ಕಾಳಜಿಯನ್ನು ವಹಿಸುತ್ತಿದ್ದು ಈ ಬಗ್ಗೆ ಬೀಡಿ ಕಾರ್ಮಿಕರು ತಿಳಿದುಕೊಳ್ಳಬೇಕಾಗಿದೆ.
ಪಿಂಚಣಿದಾರರ ಸಂಘದ ರಾಧಾ ಅವರು ಸ್ವಾಗತಿಸಿ ಪಿಂಚಣಿದಾರರಿಗೆ ಪೆನ್ನನ್ ಏಕತಾ ಸಂಘರ್ಷ ಮಂಚ್ ರೂಪಿಕರಿಸಿದ 10 ಬೇಡಿಕೆಗಳನ್ನು ಕೇಂದ್ರ ಸರಕಾರ ಕೂಡಲೇ ಜಾರಿಗೊಳಿಸಬೇಕೆಂಬ ಒತ್ತಾಯಿಸುವ ನಿರ್ಣಯವನ್ನು ಮಂಡಿಸಿದರು.
Kshetra Samachara
13/09/2022 08:08 pm