ಕೃಷ್ಣಾಪುರ: ಸ್ವಾತಂತ್ರೋತ್ಸವದ ಅಮೃತಮಹೋತ್ಸವದ ಅಂಗವಾಗಿ "ಹರ್ ಘರ್ ತಿರಂಗ" ಘೋಷವಾಕ್ಯವನ್ನು ಸಾಕ್ಷಾತೀಕರಿಸಲು ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ(ರಿ) ಕೃಷ್ಣಾಪುರ ಕಾಟಿಪಳ್ಳ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೃಷ್ಣಾಪುರ ಇವರು ಜಂಟಿಯಾಗಿ ರಾಷ್ಟ್ರಧ್ವಜವನ್ನು ಆ 13ರಿಂದ 15ರ ವರೆಗೆ ಕೃಷ್ಣಾಪುರದ ಪ್ರತಿ ಮನೆಮನೆಯಲ್ಲೂ ಹಾರಾಡುವಂತಾಗಲು ಮನೆಮನೆಗಳಿಗೆ ರಾಷ್ಟ್ರಧ್ವಜವನ್ನು ಉಚಿತವಾಗಿ ನೀಡಿ ರಾಷ್ಟ್ರಪ್ರೇಮ ರಾಷ್ಟ್ರಧರ್ಮದ ಬಗ್ಗೆ ತಿಳುವಳಿಕೆ ನೀಡಿದರು.
ಅಮೃತ ಮಹೋತ್ಸವ ರಾಷ್ಟ್ರಧ್ವಜ ಉಚಿತ ವಿತರಣಾ ಅಭಿಯಾನದಲ್ಲಿ ಯುವಕ ಮಂಡಲದ ಆಧ್ಯಕ್ಷ ಶಿವಪ್ರಸಾದ್ ಬೊಳ್ಳಾಜೆ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಸುವರ್ಣ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ ಸುಧಾಕರ್ ಕಾಮತ್, ಸಂಘಟನಾ ಕಾರ್ಯದರ್ಶಿ ಶೇಖರ್ ದೇವಾಡಿಗ, ಕೋಶಾಧಿಕಾರಿ ಸೂರಜ್ ರೈ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ದುರ್ಗಾಪ್ರಸಾದ್ ಹೊಳ್ಳ, ಪ್ರಧಾನ ಕಾರ್ಯದರ್ಶಿ ಪಿ ಉಪೇಂದ್ರ ಆಚಾರ್ಯ, ಮಾಧವ ಬಂಗೇರ, ಲೀಲಾಧರ್ ಬಿ ಮೂಲ್ಯ, ಹರಿಪ್ರಸಾದ್ ಕಲ್ಲಮಾರ್, ಮೋಹನ್ ಬಿ ಮೂಲ್ಯ, ಉಮೇಶ್, ಪ್ರಸಾದ್ ದೇವಾಡಿಗ, ಕೃಷ್ಣ ಎನ್, ರಾಹುಲ್ ಪಿ ಶೆಟ್ಟಿ, ಶರತ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
12/08/2022 12:06 pm