ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕ: ಅಳಿಯೂರಿಗೆ ಪದವಿಪೂರ್ವ ಕಾಲೇಜು ಮಂಜೂರು

ಮೂಡುಬಿದಿರೆ:ಬಹುಕಾಲದ ಬೇಡಿಕೆಯಾದ ಅಳಿಯೂರು ಪದವಿಪೂರ್ವ ಕಾಲೇಜಿನ ಕನಸನ್ನು ಕಳೆದ ಕೆಲ ವರ್ಷಗಳಿಂದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಳಿಯೂರು ಪ್ರದೇಶದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ನಿರ್ಮಿಸುವಲ್ಲಿ ಅವಿರತ ಹೋರಾಟ ನಡೆಸಿ ಯಶಸ್ವಿಯಾದ ಮುಲ್ಕಿ- ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಇವರನ್ನು ಅಳಿಯೂರು ಪ್ರೌಢಶಾಲೆಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ಇವರನ್ನು ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕರು ಮೂಡುಬಿದಿರೆಯಲ್ಲಿ ಬಡವರು, ಮಧ್ಯಮ ವರ್ಗದವರು ಉಚಿತ ಶಿಕ್ಷಣವನ್ನು ಪಡೆಯುವುದು ನನ್ನ ಉದ್ದೇಶವಾಗಿದೆ. ಈ ಕಾರಣಕ್ಕಾಗಿ ನಾನು ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ತರುವಲ್ಲಿ ಹೋರಾಟ ನಡೆಸಿದ್ದೇನೆ ಅಳಿಯೂರಿಗೆ ಸದ್ಯಕ್ಕೆ ಕಲಾ (ಆರ್ಟ್ಸ್ ) ವಿಭಾಗ ಮಾತ್ರ ಬಂದಿದೆ ಮುಂದಿನ ದಿನಗಳಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ತರುವಲ್ಲಿ ಪ್ರಯತ್ನ ಮಾಡುವೆವು ಹಾಗೂ ಇದರ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಗ್ರಾಮಸ್ಥರು ವಹಿಸಿಕೊಳ್ಳಬೇಕು ಎಂದು ಶಾಸಕರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Edited By : PublicNext Desk
Kshetra Samachara

Kshetra Samachara

01/08/2022 08:00 am

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ