ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: 'ನೈಜ ಸಮಸ್ಯೆಗಳ ಪರಿಹಾರಕ್ಕೆ ಜೈವಿಕ ತಂತ್ರಜ್ಞಾನ ಬಳಸಿ'

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ವಿಭಾಗ ಹಾಗೂ ಮಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಆಶ್ರಯದಲ್ಲಿ ಆಹಾರ ಮತ್ತು ಫಾರ್ಮಾಸ್ಯುಟಿಕಲ್ ಜೈವಿಕ ತಂತ್ರಜ್ಞಾನದ ಕುರಿತ ಅಂತರರಾಷ್ಟ್ರೀಯ ಮಟ್ಟದ ಕಾನ್ಫರೆನ್ಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಯನಾಡ್‌ನ ಡಾ. ಮೂಪೆನ್ಸ್ ಮೆಡಿಕಲ್ ಕಾಲೇಜಿನ ಫಾರ್ಮಾಕಾಲಜಿ ವಿಭಾಗದ ಸಹಪ್ರಾಧ್ಯಪಕ ಡಾ. ರವಿ ಮುಂಡುಗಾರು, ಸಮಸ್ಯೆಗಳನ್ನು ಮೂಲದಿಂದ ಅರಿತು ಅದಕ್ಕೆ ಪರಿಹಾರವನ್ನು ಹುಡುಕಬೇಕು. ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಡ್ರಗ್‌ಗಳ ಬಳಕೆಯನ್ನು ಅರಿತುಕೊಂಡು, ಔಷಧೀಯ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಬೇಕೆಂದು ಹೇಳಿದರು.

ಡೆನ್‌ಮಾರ್ಕ್ನ ಯುನಿವರ್ಸಿಟಿ ಆಫ್ ಕೋಪನ್‌ಹೇಗನ್ ಇನ್‌ಗ್ರೀಡಿಯಂಟ್ ಆ್ಯಂಡ್ ಡೈರಿ ಟೆಕ್ನಾಲಜಿಯ ಸಹಪ್ರಾಧ್ಯಾಪಕ ಡಾ. ಮಹೇಶ್ ಎಂ. ಪೂಜಾರಿ, ಅಮೆರಿಕಾದ ಟೆಕ್ಸಾಸ್ ಎ ಆ್ಯಂಡ್ ಎಂ ಯುನಿವರ್ಸಿಟಿಯ ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಅಸೋಸಿಯೇಟ್ ಡಾ. ಶಮಾ ರಾವ್, ಅಮೆರಿಕಾದ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಸೆಂಟರ್‌ನ ಪೋಸ್ಟ್ ಡಾಕ್ಟೋರಲ್ ರಿಸರರ್ಚ್ ಫೆಲೋ ಡಾ. ಮಹೇಶ್ ಪ್ರಸಾದ್ ಬೇಕಲ್ ವಿದ್ಯಾರ್ಥಿಗಳಿಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೋಸ್ಟರ್ ಪ್ರೆಸೆಂಟೇಶನ್‌ನಲ್ಲಿ ಆಳ್ವಾಸ್ ಕಾಲೇಜಿನ ಸಿದ್ದೇಶ್ ಪ್ರಥಮ, ಎಸ್‌ಡಿಎಂ ಕಾಲೇಜಿನ ಸಂಧ್ಯಾ ದ್ವಿತೀಯ ಸ್ಥಾನ ಪಡೆದರು. ಓರಲ್ ಪ್ರೆಸೆಂಟೇಶನ್‌ನಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ಸಂಸ್ಥೆಯ ಅನಘ ಪ್ರಥಮ, ಮಂಗಳೂರು ವಿವಿಯ ಶಿಲ್ಪ ಬಿ ದ್ವಿತೀಯ ಸ್ಥಾನ ಗಳಿಸಿದರು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥ ಡಾ. ರಾಮ್ ಭಟ್ ಪಿ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೇಯಾ ವಂದಿಸಿ, ಪ್ರೀತಿಕಾ ಸಿ ಪೂಜಾರಿ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

27/07/2022 06:13 pm

Cinque Terre

1.51 K

Cinque Terre

0

ಸಂಬಂಧಿತ ಸುದ್ದಿ