ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಲಭೂತ ಸೌಕರ್ಯ ವಂಚಿತ ಕುಟುಂಬಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದ ತಹಶೀಲ್ದಾರ್ ಕ್ರಮಕ್ಕೆ ಉಮಾನಾಥ ಕೋಟ್ಯಾನ್ ತಡೆ

ಮೂಡುಬಿದಿರೆ : ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯ ಪಲ್ಕಿಟ್ಲ ಗುಡ್ಡ ಪ್ರದೇಶದಲ್ಲಿ ಸರಿಯಾದ ಮೂಲಭೂತ ಸೌಕರ್ಯವಿಲ್ಲದೇ ತಗಡುಶೀಟ್ ಹಾಕಿ ಮನೆ ಕಟ್ಟಿ ಕುಳಿತುಕೊಂಡಿದ್ದ ಕುಡುಬಿ ಜನಾಂಗದ 6 ಕುಟುಂಬಗಳಿಗೆ ಸರಕಾರಿ ಜಾಗದಲ್ಲಿ(164 ಸರ್ವೇ ನಂಬ್ರ) ಮನೆಕಟ್ಟಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ತಹಶೀಲ್ದಾರ್ ಪುಟ್ಟರಾಜು ಕಳೆದ ತಿಂಗಳು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸೂಚನೆ ನೀಡಿದ್ದ ಬೆನ್ನಲೇ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಸೂಚಿಸಿದ್ದು, ಬದಲಿ ವ್ಯವಸ್ಥೆ ಕಲ್ಪಿಸದಂತೆ ಶಾಸಕರಿಗೆ ಜಿ.ಪಂ. ಮಾಜಿ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಒತ್ತಡ ಹೇರಿದ್ದೇ ಕಾರಣವೆಂದು ಎಂದು ಆರೋಪಿಸಿ ತೆಂಕಮಿಜಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಒಂಟಿಮಾರಿನಲ್ಲಿ 2003ರಲ್ಲಿ 26 ಸೈಟ್‌ಗಳಿಗೆ ಹಕ್ಕುಪತ್ರವನ್ನು ನೀಡಲಾಗಿತ್ತು. ಆದರೆ ಕೆಲವರು ಬೇರೆ ಕಡೆಗಳಲ್ಲಿ ನಿವೇಶನವನ್ನು ಹೊಂದಿದ್ದಾರೆ. ಕಳೆದ ತಿಂಗಳು ತಹಶೀಲ್ದಾರ್ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಅವರು ಮೂಲಭೂತ ಸೌಕರ್ಯವಿಲ್ಲದ 6 ಕುಟುಂಬಗಳಿಗೆ ಮನೆಕಟ್ಟಿ ಕುಳಿತುಕೊಳ್ಳಲು ಒಂಟಿಮಾರಿನಲ್ಲಿ ಅವಕಾಶ ಕಲ್ಪಿಸಬೇಕೆಂದು ಸೂಚಿಸಿದ್ದರು. ಬಳಿಕ ತಹಶಿಲ್ದಾರ್ ಬದಲಿ ವ್ಯವಸ್ಥೆ ಸಾಧ್ಯವಿಲ್ಲ ಎಂದು ತಿಳಿಸಿದಾಗ ಗ್ರಾಮಸ್ಥರು‌ ಗ್ರಾಮಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಗ್ರಾಮಸ್ಥರಾದ ಭಾಸ್ಕರ್ ಶೆಟ್ಟಿ ಮತ್ತು ದಿನೇಶ್ ಎಂಬವರು ಸೈಟ್ ನೀಡದಂತೆ ಸುಚರಿತ ಶೆಟ್ಟಿಯವರು ಶಾಸಕರ ಮೇಲೆ ಒತ್ತಡ ಹೇರಿದ್ದಾರೆ ಎಂದು ತಮ್ಮ ಮೇಲೆ ಆರೋಪವಿದೆ ಎಂದಾಗ ಸಿಟ್ಟಿಗೆದ್ದ ಸುಚರಿತ ಶೆಟ್ಟಿ ನನ್ನ ಮೇಲೆ ಆರೋಪ ಮಾಡಿದವರು ಯಾರೆಂದು ತಿಳಿಸಿ ಇಲ್ಲದಿದ್ದರೆ ಗ್ರಾಮಸಭೆ ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.ಸೈಟ್‌ನ್ನು ತಡೆ ಹಿಡಿಯಲು ತಾನು ಶಾಸಕರ ಬಳಿ ಹೇಳಿಲ್ಲ ಆದರೆ ಸುಮ್ಮನೆ ನನ್ನ ಮೇಲೆ ಅಪಪ್ರಚಾರ ಮಾಡಲಾಗಿದೆ. ಈ ಬಗ್ಗೆ ತಾನು ಸತ್ಯ ಹೇಳಲು ಜಾರಂದಾಯನ ಕ್ಷೇತ್ರಕ್ಕೆ ಬರಲು ಸಿದ್ಧ ಎಂದು ಹೇಳಿ ಸಭೆಯಿಂದ ಕೆಳಗಿಳಿದರು. ಬಳಿಕ ಭಾಸ್ಕರ್ ಶೆಟ್ಟಿ ಹಾಗೂ ದಿನೇಶ್ ಅವರನ್ನು ಸಮಾಧಾನಪಡಿಸಿ ಗ್ರಾಮಸಭೆಯನ್ನು ಮುಂದುವರೆಸಲು ಅವಕಾಶ ನೀಡುವಂತೆ ವಿನಂತಿಸಿದರು. ಇದಕ್ಕೆ ಒಪ್ಪಿದ ಅವರು ಗ್ರಾಮಸಭೆಯನ್ನು ಮುಂದುವರೆಸುವಂತೆ ತಿಳಿಸಿದರು.

ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷೆ ಸಮಿತಾ, ಪಂಚಾಯತ್ ಸದಸ್ಯರು, ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರಾದ ಕರುಣಾಕರ ಶೆಟ್ಟಿ (ಬಡಗಮಿಜಾರು), ಮಹೇಶ್ (ತೆಂಕಮಿಜಾರು) ಮತ್ತಿತ

ರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/07/2022 12:38 pm

Cinque Terre

816

Cinque Terre

0

ಸಂಬಂಧಿತ ಸುದ್ದಿ