ಬೆಂಜನಪದವು:ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರ ಮಾರುತಿ ಶಾಖೆ ಶ್ರೀರಾಮ ನಗರ ಬೆಂಜನಪದವು ಇದರ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ಪ್ರಯುಕ್ತ “ಹಿಂದೂ ಸಾಮ್ರಾಜ್ಯ ದಿನ” ಆಚರಣೆಯು ಬೆಂಜನಪದವಿನ ಶ್ರೀರಾಮ ನಗರದಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ವಿ ಹಿಂ ಪ ಬಂಟ್ವಾಳ ಅಧ್ಯಕ್ಷ ಪ್ರಸಾದ್ ಬಿಸಿರೋಡ್ ಶುಭ ಹಾರೈಸಿದರು. ಭರತ್ ಕುಮ್ದೇಲ್, ದಾಮೋದರ ತುಂಗಾ, ಸುಪ್ರೀತ್ ಆಳ್ವ ,ವೇದಿಕೆಯಲ್ಲಿ ಉಪಸ್ಥಿತರಿದ್ದರು.
Kshetra Samachara
14/06/2022 12:33 pm