ಕೃಷ್ಣಾಪುರ: ಕೃಷ್ಣಾಪುರದ 9ನೇ ಬ್ಲಾಕ್ ನಲ್ಲಿರುವ ಬ್ರಹ್ಮ ಬೈದರ್ಕಳ ಸೇವಾ ಸಮಿತಿಯ ಜೀರ್ಣೋದ್ಧಾರ ನಡೆಯಲಿದ್ದು, ಆ ಪ್ರಯುಕ್ತ ಸಮಿತಿ ರಚಿಸಿ ಸೇವಾ ಸಮಿತಿಗೆ ಅಗತ್ಯ ಸ್ಥಳವನ್ನು ಆಡಳಿತಾತ್ಮಕವಾಗಿ ಹಸ್ತಾಂತರಿಸಲು ಸಹಕರಿಸಿದ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಜೀರ್ಣೋದ್ಧಾರಕ್ಕೆ ಸರಕಾರದಿಂದ ಸೂಕ್ತ ಅನುದಾನ ಜೊತೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು. ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ, ಕಾರ್ಪೊರೇಟರ್ ಲಕ್ಷ್ಮೀ ಶೇಖರ್ ದೇವಾಡಿಗ, ಪ್ರಮುಖರಾದ ರಮಾನಾಥ ಶೆಟ್ಟಿ, ಕೈಲಾಶ್ ತಡಂಬೈಲ್, ಮುಖಂಡರು, ಗಣ್ಯರು, ಸ್ಥಳೀಯ ಕಾರ್ಯಕರ್ತರು ಜೊತೆಗಿದ್ದರು.
Kshetra Samachara
05/06/2022 01:01 pm