ಬಂಟ್ವಾಳ: ಸಜೀಪ ಮಾಗಣೆಯ ನಡಿಯೇಲು ದೈವಂಗಂಳು ಉಳ್ಳಾಲ್ತಿ, ನಾಲ್ಕೈತ್ತಾಯ ಕ್ಷೇತ್ರಕ್ಕೆ ಸಂಬಂಧಪಟ್ಟ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೇಐವಸ್ಥಾನದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅನ್ನಛತ್ರ ಕಟ್ಟಡ ದ ಶಿಲಾನ್ಯಾಸ ವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪಣೋಲಿಬೈಲು ಕ್ಷೇತ್ರದ ಭಕ್ತರಿಗೆ ಅನ್ನಪ್ರಸಾದ ನೀಡುವ ಹಲವು ವರ್ಷಗಳ ಯೋಜನೆಯನ್ನು ಸಾಹಕಾರಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತ ಸುಮಾರು 1 ಕೋಟಿ ರೂ. ವೆಚ್ಚದ ಅನ್ನಛತ್ರಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಕಾರಣೀಕ ಕ್ಷೇತ್ರವಾದ ಪಣೋಲಿಬೈಲಿನಲ್ಲಿ ಸ್ಥಳಾವಕಾಶ ದ ಕೊರತೆಯಿಂದ ಅನ್ನಪ್ರಸಾದ ನೀಡುವುದು ಸಾಧ್ಯವಾಗಿರಲಿಲ್ಲ.ಮುಂದೆ ಕಟ್ಟಡ ಪೂರ್ಣಗೊಂಡ ಬಳಿಕ ಜಿಲ್ಲೆಯ ಎ.ಗ್ರೇಡ್ ದೇವಸ್ಥಾನ ದಂತೆ ಭಕ್ತರಿಗೆ ಅನ್ನಪ್ರಸಾದ ನೀಡುವುದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
Kshetra Samachara
19/05/2022 10:02 pm