ಬಜಪೆ:ಬಜಪೆ - ಕೈಕಂಬ ರಾಜ್ಯ ಹೆದ್ದಾರಿಯ ಬಜಪೆ ಪೊಲೀಸ್ ಠಾಣೆ ಯ ಸಮೀಪದಿಂದ ಬಜಪೆ ಮುರಜಂಕ್ಷನ್ ಗೆ ಸಂಪರ್ಕಿಸುವ ರಸ್ತೆಯ ಅಂಚಿನಲ್ಲಿ ರಾಶಿ ರಾಶಿ ತ್ಯಾಜ್ಯವು ಸಂಗ್ರಹವಾಗಿದ್ದು,ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಮೂಗು ಮುಚ್ಚಿಕೊಂಡೆ ಹೋಗ ಬೇಕಾದ ಪರಿಸ್ಥಿತಿ ಉಂಟಾಗಿದೆ.ರಸ್ತೆಯು ಹಳೆಯ ವಿಮಾನ ನಿಲ್ದಾಣ ಹಾಗೂ ಬಜಪೆ ಮತ್ತು ಮಂಗಳೂರಿಗೆ ಸಂಪರ್ಕಿಸುವಂತಹ ರಸ್ತೆಯಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ರಸ್ತೆಯಂಚಿನಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು,ಇದೀಗ ತ್ಯಾಜ್ಯವು ಕೊಳೆತು ನಾರುತ್ತಿದೆ.ಅಲ್ಲದೆ ರಸ್ತೆಯಲ್ಲಿ ಸಾಗುವಂತಹ ವಾಹನಿಗರು ಹಾಗೂ ಸಾರ್ವಜನಿಕರಿಗೆ ಗಬ್ಬುನಾಥ ಬೀರುತ್ತಿದೆ.ರಸ್ತೆಯಂಚಿನಲ್ಲಿನ ತ್ಯಾಜ್ಯ ದ ರಾಶಿಯ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಈಗಾಗಲೇ ಕೋಳೆತು ನಾರುತ್ತಿರುವ ತ್ಯಾಜ್ಯವು ಈ ರೀತಿಯಲ್ಲಿಯೇ ಮುಂದುವರಿದರೆ ಮುಂದೆ ವಿವಿಧ ರೋಗಗಳಿಗೂ ಕಾರಣವಾಗಬಹುದು.ಇದೀಗ ಮಳೆ ಕೂಡ ಆರಂಭವಾಗಿದ್ದು,ಇದಕ್ಕೂ ಮುಂಚೆ ಹೆಚ್ಚಿನ ಮುಂಜಾಗರೂಕತೆಯನ್ನು ವಹಿಸುವುದು ಸೂಕ್ತ.ರಸ್ತೆಯಂಚಿನಲ್ಲಿ ಕಸ ಎಸೆದುಹೋಗುವವರ ವಿರುದ್ದ ಕ್ರಮ ಜರುಗಿಸುದರ ಜತೆಗೆ ದಂಡವನ್ನು ವಿಧಿಸಬೇಕು.
ಈಗಾಗಲೇ ಸಮೀಪದ ಕೆಲವೊಂದು ಪಂಚಾಯತ್ ವ್ಯಾಪ್ತಿಗಳಲ್ಲಿ ರಸ್ತೆಯಲ್ಲಿ ಕಸ ಎಸೆದುಹೋಗುವವರಿಗೆ ದಂಡವನ್ನು ವಿಧಿಸಲಾಗಿತ್ತು.ಹಾಗೂ ಕಸ ಎಸೆದವರಿಂದಲೇ ಕಸವನ್ನು ತೆಗೆಯುವಂತಹ ಕಾರ್ಯವನ್ನು ಮಾಡಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಬಗ್ಗೆ ಸಂಬಂಧಪಟ್ಟವರು ರಸ್ತೆಯಲ್ಲಿ ತ್ಯಾಜ್ಯ ಎಸೆದು ಹೋಗುವವರ ವಿರುದ್ದ ಕ್ರಮ ಜರುಗಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
Kshetra Samachara
18/05/2022 06:17 pm