ಬಂದು: ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಮತ್ತು ತಮ್ಮದೇ ಶೈಲಿಯ ಮೂಲಕ ಪ್ರಸಿದ್ಧರಾಗಿರುವ ಕುರಿಯ ಭಾಗವತರ ಕಾಂಬಿನೇಶನ್ ನ ಹಾಡುಗಾರಿಕೆ ಮತ್ತು ನೃತ್ಯಪ್ರದರ್ಶನದ ದೃಶ್ಯಾವಳಿಯೀಗ ವೈರಲ್ ಆಗಿದೆ.
ಬಂಟ್ವಾಳ ತಾಲೂಕಿನ ಪದ್ಯಾಣ ದೇವಸ್ಥಾನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದ ಕೋಳ್ಯೂರು ರಾಮಚಂದ್ರ ರಾವ್ ಅವರು ಕುರಿಯ ಗಣಪತಿ ಶಾಸ್ತ್ರಿಗಳ ಮನೆಗೆ ಹೋಗಿದ್ದರು.
ಇದೇ ಸಂದರ್ಭ ಕುರಿಯ ಗಣಪತಿ ಶಾಸ್ತ್ರಿ ಅವರ 'ಕರಮುಗಿವೆ ಕರಿಮುಖನೇ' 'ಆವಲ್ಲಿಂದ ಬಂದಿರಯ್ಯ' ಹಾಗೂ 'ನೋಡಿರಿ ದ್ವಿಜರು ಪೋಪುದನು' ಪದ್ಯಗಳಿಗೆ ಹೆಜ್ಜೆ ಹಾಕಿದರು. ಮಡಿಮುಂಡ ಶಾಸ್ತ್ರಿ ಅವರು ಮದ್ದಳೆ ನುಡಿಸಿದರು.
Kshetra Samachara
02/04/2022 09:23 am