ಬಜಪೆ:ಬಜಪೆಯಿಂದ ಕೈಕಂಬಕ್ಕೆ ಸಾಗುವಂತಹ ರಸ್ತೆಯ ಪೆರಾರ ಸಮೀಪದ ಕಜೆಪದವು ಎಂಬಲ್ಲಿ ರಸ್ತೆಯ ಅಂಚಿನಲ್ಲಿ ಕಸದ ರಾಶಿ ರಾಶಿ ತುಂಬಿಹೋಗಿದೆ.ಕಳೆದ ಹಲವು ತಿಂಗಳುಗಳಿಂದ ಕಸವು ದಿನಂಪ್ರತಿ ಹೆಚ್ಚಾಗುತ್ತಲೇ ಹೋಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಪಂಚಾಯತ್ ಕಳೆದಕೆಲ ವಾರಗಳ ಹಿಂದೆ ರಸ್ತೆಯಂಚಿನಲ್ಲಿನ ಕೆಲ ಕಡೆಗಳಲ್ಲಿನ ಕಸದ ರಾಶಿಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತೆರವುಗೊಳಿಸಿತ್ತು.ಅಲ್ಲದೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಕೆಲವು ಕಡೆಗಳ ಲ್ಲಿ ಕಸ ಎಸೆಯದಂತೆ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದು ,ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ದಂಡವನ್ನು ಕೂಡ ವಿಧಿಸಿತ್ತು.ಆದರೆ ಇದಾವುದಕ್ಕೂ ಕ್ಯಾರೇ ಅನ್ನದ ಕೆಲ ಜನಗಳು ರಸ್ತೆಯ ಅಂಚಿನಲ್ಲಿಯೇ ಕಸವನ್ನು ಎಸೆದು ಹೋಗುತ್ತಿದ್ದಾರೆ.ಈ ಬಗ್ಗೆ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕಾಗಿದೆ ಎಂಬುವುದು ಸಾರ್ವಜನಿಕ ಆಗ್ರಹವಾಗಿದೆ.
Kshetra Samachara
10/03/2022 07:53 pm