ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಪುರ: ಕೋವಿಡ್ ನಿಂದ ಮೃತಪಟ್ಟ ಸಂತ್ರಸ್ಥ ಕುಟುಂಬಗಳಿಗೆ ಶಾಸಕರಿಂದ ಪರಿಹಾರ ಧನದ ಚೆಕ್ ವಿತರಣೆ

ಬಜಪೆ:ಕೋವಿಡ್ ನಿಂದಾಗಿ ನಿಂದ ಮೃತಪಟ್ಟ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಬಿಡುಗಡೆ ಮಾಡಿದ ಪರಿಹಾರ ಧನವನ್ನು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಇಂದು ವಿತರಿಸಿದರು.

ಗುರುಪುರದ ನಾಡಕಚೇರಿಯಲ್ಲಿ ಒಟ್ಟು 27 ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ಚೆಕ್ ನ್ನು ಅವರು ವಿತರಿಸಿದರು.ನಂತರ ಮಾತನಾಡಿದ ಶಾಸಕ ಭರತ್ ಶೆಟ್ಟಿ ಅವರು ಬಿಪಿಎಲ್ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 50 ಸಾವಿರ ಹಾಗೂ ರಾಜ್ಯ ಸರಕಾರ ಒಂದು ಲಕ್ಷ ರೂಪಾಯಿಯನ್ನು ನೀಡುತ್ತಿದೆ.

ಎಪಿಎಲ್ ಸಂತ್ರಸ್ತ ಕುಟುಂಬದ ಸದಸ್ಯರಿಗೆ ರಾಜ್ಯ ಸರಕಾರ ತಲಾ ಐವತ್ತು ಸಾವಿರ ರೂಪಾಯಿ ನೀಡುತ್ತಿದೆ.ಕ್ಷೇತ್ರದ ಕಂದಾಯ ಅಧಿಕಾರಿಗಳಿಂದ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿ ಅವರಿಗೆ ಪರಿಹಾರ ದೊರಕಿಸುವ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಈ ಸಂದರ್ಭ 11 ಫಲಾನುಭವಿಗಳಿಗೆ ಕೇಂದ್ರ ಸರಕಾರದ ಉಜಾಲ ಯೋಜನೆಯಲ್ಲಿ ಗ್ಯಾಸ್ ಸೌಲಭ್ಯಗಳನ್ನು ವಿತರಿಸಲಾಯಿತು.

ಇತ್ತೀಚೆಗೆ ಸುರತ್ಕಲ್ ಹಾಗೂ ಕಾವೂರು ಕಚೇರಿಯಲ್ಲಿ 16 ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ಚೆಕ್ ಅನ್ನು ಶಾಸಕರು ವಿತರಿಸಿದ್ದರು.

ಈ ಸಂದರ್ಭದಲ್ಲಿ ಕಂದಾವರ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ, ಉಪತಹಶೀಲ್ದಾರ್ ಶಿವಪ್ರಸಾದ್, ಕಂದಾಯ ಅಧಿಕಾರಿಗಳು, ಪಂಚಾಯತ್ ಸದಸ್ಯರುಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/12/2021 07:00 pm

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ