ಬಜಪೆ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಕಟೀಲು ಪದವಿಪೂರ್ವ ವಿದ್ಯಾಲಯದ ಆವರಣದಲ್ಲಿ ತಾ. 13 ಹಾಗೂ 14 ದಂದು ಭ್ರಮರ - ಇಂಚರ ಎಂಬ ನುಡಿ ಹಬ್ಬ ಆಯೋಜಿಸಲಾಗಿದ್ದು, ಇದರ ಅಂಗವಾಗಿ
ಮಂಗಳೂರು ತಾಲೂಕು ಮಟ್ಟದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯು ತಾ. 11ರ ಗುರುವಾರ ಪೂರ್ವಾಹ್ನ 10.30ರಿಂದ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ವಿದ್ಯಾಲಯದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲಾ, ಪದವೀಪೂರ್ವಸ್ತರ ಹಾಗೂ ಪದವಿ ಸ್ತರಗಳಲ್ಲಿ ನಡೆಯಲಿದೆ. ಶಿಕ್ಷಣ, ದೇಶಭಕ್ತಿ, ಸಾಧಕರ ವ್ಯಕ್ತಿ ಚಿತ್ರ ಹೀಗೆ ಸೂಕ್ತ ವಿಷಯಗಳನ್ನು ಸ್ಪರ್ಧಾಳುಗಳೇ ಆರಿಸಬೇಕು. ವಿವರಗಳಿಗೆ ಪದ್ಮನಾಭ ಮರಾಠೆ (9110867280) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Kshetra Samachara
10/11/2021 07:52 am