ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಲಿತೀರ್ಥ: ಗುಹಾ ತೀರ್ಥ ಸ್ನಾನಕ್ಕೆ ಚಾಲನೆ

ಬಜಪೆ: ಮಂಗಳೂರಿನಿಂದ 35 ಕಿ.ಮೀ ದೂರದಲ್ಲಿರುವ ಇತಿಹಾಸ ಪ್ರಸಿದ್ದ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ ಕ್ಷೇತ್ರ.ಸುಮಾರು 500 ರ ಹಿಂದಿನ ಇತಿಹಾಸವಿರುವಂತಹ ಕ್ಷೇತ್ರವಾಗಿದೆ.ಗುಹೆಯ ಒಳಗೆ ನೀರಿನ ಹನಿಗಳು ನೆಲ್ಲಿಕಾಯಿಯಂತೆ ಕೆರೆಗೆ ಬೀಳುತ್ತಿರುವ ಕಾರಣ ನೆಲ್ಲೀತೀರ್ಥ ವೆಂಬ ಹೆಸರು ಬಂದಿದೆ.ದೇವಾಲಯದ ಬಲಕ್ಕೆ ನೈಸರ್ಗಿಕ ಗುಹೆ ಇದ್ದು,ಸುಮಾರು 200 ಮೀ.ಉದ್ದವಿದೆ.

ಇಂದು ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾ ಪ್ರವೇಶ ಹಾಗೂ ಗುಹಾ ತೀರ್ಥ ಸ್ನಾನಕ್ಕೆ ತುಲಾ ಸಂಕ್ರಮಣದ ದಿನ ಶುಭ ಮುಹೂರ್ತದಲ್ಲಿ ಕ್ಷೇತ್ರದ ತಂತ್ರಿ ಗಳಾದ ಬಗ್ಗಮಜಲು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರುಗಿದವು. ಅವರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ

ಕಟೀಲುಶ್ರೀದುರ್ಗಾಪರಮೇಶ್ವರೀ ದೇವಳದ ಅರ್ಚಕ ಕೆ.ಲಕ್ಷ್ಮೀ ನಾರಾಯಣ ಆಸ್ರಣ್ಣ,ರಾಜ್ಯ ಕ ಸಾ ಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ,ಧಾರ್ಮಿಕ ಪರಿಷತ್ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ,ದ.ಕ ಜಿಲ್ಲಾ ಕ ಸಾ ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಪ್ರಮುಖರಾದ ಎನ್ ವಿ ವೆಂಕಟರಾಜ ಭಟ್,ಪ್ರಸನ್ನ ಭಟ್ ನೆಲ್ಲಿತೀರ್ಥ,ಅರ್ಚಕ ಗಣಪತಿ ಭಟ್,ಆನಂದ ಕಾವ ಸಾಂತ್ರ ಬೈಲ್,ಸಂತೋಷ್ ಕುಮಾರ್ ನೀರುಡೆ,ಕೃಷ್ಣಪ್ಪ ಪೂಜಾರಿ ನೆಲ್ಲಿತೀರ್ಥ,ಎನ್.ವಿ.ಜಿ.ಕೆ ಭಟ್, ಶ್ರೀ ನಿವಾಸ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಗುಹಾಲಯ ಪ್ರವೇಶವು (ಇಂದಿನಿಂದ) ತುಲಾ(ಕಾವೇರಿ)ಸಂಕ್ರಮಣದಂದು ಪ್ರಾರಂಭ ಗೊಂಡು ಏಪ್ರಿಲ್ 14ಮೇಷ ಸಂಕ್ರಮಣ ದವರೆಗೂ ಮಧ್ಯಾಹ್ನ 1 ರವರೆಗೂ ಭಕ್ತರಿಗೆ ಗುಹಾಪ್ರವೇಶ ತೀರ್ಥ ಸ್ನಾನಕ್ಕೆ ಅವಕಾಶವಿದೆ.

Edited By : PublicNext Desk
Kshetra Samachara

Kshetra Samachara

17/10/2021 01:45 pm

Cinque Terre

7.19 K

Cinque Terre

0

ಸಂಬಂಧಿತ ಸುದ್ದಿ