ಬಜಪೆ:ಜಿಲ್ಲಾ ಪ್ರಶಸ್ತಿ ಪುರಸ್ಕೃತ ವಿಜಯ ಯುವ ಸಂಗಮ (ರಿ.) ಎಕ್ಕಾರು ಇದರ ಅಧ್ಯಕ್ಷರಾದ ಆದರ್ಶ್ ಶೆಟ್ಟಿ ಎಕ್ಕಾರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೇತನ್ ಶೆಟ್ಟಿ ಅವರು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಮಾನ್ಯ ಥಾವರ್ ಚಂದ್ ಗೆಹ್ಲೋಟ್ ರವರನ್ನು ಭೇಟಿಯಾಗಿ ರಜತ ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಸವಿವರವಾಗಿ ವಿವರಿಸಿದರು. ಸಂಪೂರ್ಣ ಮಾಹಿತಿ ಪಡೆದ ರಾಜ್ಯಪಾಲರು ಸಂಸ್ಥೆಯ ಕಾರ್ಯವೈಖರಿ, ಪರಿಸರ ಕಾಳಜಿ, ಸ್ವಚ್ಚತೆ, ಸಮಾಜ ಸೇವೆ, ಶಿಕ್ಷಣ, ಸಾಮಾಜಿಕ ಭದ್ರತೆ, ಕೃಷಿ, ಆರೋಗ್ಯ, ಆಶ್ರಯ ಹಾಗು ಇನ್ನಿತರ ಯೋಜನೆಗಳು ಮತ್ತು ಕೊಡುಗೆಗಳನ್ನು ಮನಸಾರೆ ಮೆಚ್ಚಿ ಸಂಸ್ಥೆಗೆ ಶುಭ ಹಾರೈಸಿದರು. ಇನ್ನು ಮುಂದೆಯೂ ಹೀಗೆಯೇ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರಬೇಕು ಎಂದು ಹುರಿದುಂಬಿಸಿದರು.
Kshetra Samachara
08/10/2021 05:51 pm