ಬಜಪೆ: ಕಟೀಲು - ಬಜಪೆ ರಾಜ್ಯ ಹೆದ್ದಾರಿ 67 ರ ಎಕ್ಕಾರು ಎಕ್ಕಾರು ದುರ್ಗಾನಗರ ತಿರುವಿನ ಸಮೀಪ ಬೃಹತ್ ಗಾತ್ರದಲ್ಲಿ ಹುಲ್ಲುಗಳು ಸಹಿತ ಮುಳ್ಳಿನ ಪೊದೆಯು ಬೆಳೆದು ನಿಂತಿದ್ದು,ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯದ ಸ್ಥಿತಿಯಲ್ಲಿತ್ತು.ಅಲ್ಲದೆ ರಸ್ತೆಯ ಅಂಚಿಗೆ ಹಾಕಲಾಗಿದ್ದ ಬಿಳಿ ಬಣ್ಣದ ಗೆರೆ ಕೂಡ ಹುಲ್ಲುಗಳಿಂದ ತುಂಬಿ ಹೋಗಿತ್ತು.ಹಲವು ತಿಂಗಳುಗಳ ಬಳಿಕ ಲೋಕೊಪಯೋಗಿ ಇಲಾಖೆಯಿಂದ ಇಂದು ಬೃಹತ್ ಅಗಿ ಬೆಳೆದ ಹುಲ್ಲುಗಳು ಸಹಿತ ಮುಳ್ಳಿನ ಪೊದೆಗಳನ್ನು ತೆರವು ಗೊಳಿಸಿದ್ದಾರೆ. ತೀರಾ ತಿರುವಿನಿಂದ ಕೂಡಿದ ರಸ್ತೆಯ ಅಂಚಿನಲ್ಲಿ ಬೃಹದಾಕರದಲ್ಲಿ ಬೆಳೆದ ಹುಲ್ಲುಗಳಿಂದ ಮುಖ್ಯ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆಯನ್ನು ಅನುಭವಿಸುತ್ತಿದ್ದರು.ಎದುರು ಭಾಗದಿಂದ ಬರುವಂತಹ ವಾಹನಗಳು ಕೂಡ ನೇರವಾಗಿ ಗೋಚರಿಸಲು ಅಸಾಧ್ಯವಾಗಿತ್ತು.
Kshetra Samachara
22/09/2021 10:08 pm