ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಜಾಗೆ ನೋಡಲು ಬರುತ್ತೇವೆ ಎಂದು ಬರಹೇಳಿ ಹಲ್ಲೆ: ಅಳಿಕೆಯಲ್ಲಿ ಘಟನೆ

ಬಂಟ್ವಾಳ: ‘ಬಂಟ್ವಾಳ ತಾಲೂಕಿನ ಅಳಿಕೆಯ ಬಗಂಗೋಡಿ ಎಂಬಲ್ಲಿ ಓಮ್ನಿ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ರಾಜೀವ ಬಿ.ಎಂಬವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಅವರು ನೀಡಿದ ದೂರಿನಂತೆ ಯಾರೋ ದೂರವಾಣಿ ಕರೆ ಮಾಡಿ ತರವಾಡು ಮನೆಯ ವಿಚಾರವನ್ನು ಮಾತನಾಡಲು ಹಾಗೂ ಜಾಗವನ್ನು ನೋಡಲು ಬರುತ್ತೇವೆ ಎಂದು ಹೇಳಿ ನಮಗೆ ದಾರಿ ಗೊತ್ತಿಲ್ಲ ರಸ್ತೆಗೆ ಬನ್ನಿ ಎಂದು ತಿಳಿಸಿದ್ದರು. ಅದರಂತೆ ರಾಜೀವ ಅವರು ಅಳಿಕೆ ಗ್ರಾಮದ ಶಾರದಾ ವಿಹಾರ ಬೈರಿಕಟ್ಟೆ ರಸ್ತೆ ಬರಂಗೋಡಿ ಎಂಬಲ್ಲಿಗೆ ಬಂದಾಗ ಅಲ್ಲೆ ಹತ್ತಿರದ ತಿರುವಿನಲ್ಲಿ ನಿಂತಿದ್ದ ಓಮ್ನಿ ಕಾರಿನಿಂದ ಇಬ್ಬರೂ ಅಪರಿಚಿತರು ಇಳಿದು ಬಂದು ಹಲ್ಲೆ ಮಾಡಿ , ಅವಾಚ್ಯ ಶಬ್ದಗಳಿಂದ ಬೈದು ,ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಆ ಸಮಯ ಬೊಬ್ಬೆ ಹಾಕಿದ್ದು ಅದೇ ಸಮಯಕ್ಕೆ ದಾರಿಯಲ್ಲಿ ಒಂದು ಬೈಕು ಬಂರುವುದನ್ನು ಕಂಡು ಅಪರಿಚಿತ ಇಬ್ಬರು ಆಪಾದಿತರು ಓಮ್ನಿ ಕಾರನ್ನು ಹತ್ತಿ ಹೋಗಿರುತ್ತಾರೆ ಎಂದು ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

21/09/2021 07:57 pm

Cinque Terre

3.17 K

Cinque Terre

0

ಸಂಬಂಧಿತ ಸುದ್ದಿ