ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಂಭ್ರಮದ ಶಯನೋತ್ಸವ; ಒಂದೂವರೆ ಲಕ್ಷದಷ್ಟು ಮಲ್ಲಿಗೆ ಹೂವು ದೇವಿಗೆ ಸಮರ್ಪಣೆ

ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ ನಡೆಯಿತು.ಶಯನೋತ್ಸವದ ವಿಶೇಷವೆಂದರೆ ಊರಿನ ಸುತ್ತಮುತ್ತಲಿನ ಸುಮಾರು ಒಂಭತ್ತು ಮಾಗಣೆಯ ಭಕ್ತರು ಮಲ್ಲಿಗೆ ಹೂವಿನ (ಮಂಗಳೂರು ಮಲ್ಲಿಗೆ)ಚಂಡನ್ನು ದೇವರಿಗೆ ಸಮರ್ಪಿಸುತ್ತಾರೆ .ಅದನ್ನು ದೇವಸ್ಥಾನದ ಸುತ್ತಲಿನ 4 ಮಂಟಪದಲ್ಲಿ ಹಾಸಿಗೆಯಂತೆ ಜೋಡಿಸುವ ದೃಶ್ಯ ನೋಡಲು ಬಹಳ ಸುಂದರ. ಇಲ್ಲಿ ದೇವರು ರಾತ್ರಿಯಲ್ಲಿ ಪವಡಿಸುತ್ತಾರೆ ಎಂಬುದು ನಂಬಿಕೆ.

ನಡುರಾತ್ರಿ ಆಗುವಾಗ ಮಲ್ಲಿಗೆ ಚೆಂಡುಗಳನ್ನು ಬುಟ್ಟಿಯಲ್ಲಿ ತುಂಬಿಸಿ ಗರ್ಭಗುಡಿಯಲ್ಲಿ ಇಟ್ಟು ಮುಚ್ಚುತ್ತಾರೆ. ಮಲ್ಲಿಗೆಯ ಹಾಸಿಗೆಯ ಸೊಬಗು ನೋಡುವುದೇ ಒಂದು ಆನಂದ. ಶಯನೋತ್ಸವದ ದಿನ ಎಲ್ಲರ ಮುಡಿಯಲ್ಲೂ ಮಲ್ಲಿಗೆ ಮಾಲೆ ಇರುತ್ತದೆ. ಹೂ ಸಮರ್ಪಣೆ ಮಾಡಲು 2-3 ಕಿಲೋಮೀಟರ್ ಉದ್ದದ ಸರದಿ ಸಾಲು ಇರುತ್ತದೆ. ಮಾರನೆ ದಿನ ಬೆಳಗ್ಗೆ ಶುಭ ಮುಹೂರ್ತದಲ್ಲಿ ಕವಾಟೋದ್ಘಾಟನೆ ಮಾಡಿ ,ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚುತ್ತಾರೆ. ಆ ದಿನ ಎಲ್ಲರ ಮುಡಿಯಲ್ಲೂ ಮಲ್ಲಿಗೆ ಮಾಲೆ ಇರುತ್ತದೆ. ಈ ಬಾರಿ ಸುಮಾರು ಒಂದೂವರೆ ಲಕ್ಷದಷ್ಟು ಮಲ್ಲಿಗೆ ಹೂವು ದೇವರಿಗೆ ಸಮರ್ಪಣೆಯಾಗಿದ್ದು ಲಕ್ಷಾಂತರ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

Edited By :
Kshetra Samachara

Kshetra Samachara

24/03/2022 12:02 pm

Cinque Terre

4.7 K

Cinque Terre

1

ಸಂಬಂಧಿತ ಸುದ್ದಿ